Select Your Language

Notifications

webdunia
webdunia
webdunia
webdunia

ಕರಿಯ ಸಿನಿಮಾ ನಿರ್ಮಾಪಕ ಆನೇಕಲ‍್ ಬಾಲರಾಜ್ ಅಪಘಾತದಲ್ಲಿ ದುರ್ಮರಣ

ಕರಿಯ ಸಿನಿಮಾ ನಿರ್ಮಾಪಕ ಆನೇಕಲ‍್ ಬಾಲರಾಜ್ ಅಪಘಾತದಲ್ಲಿ ದುರ್ಮರಣ
bengaluru , ಭಾನುವಾರ, 15 ಮೇ 2022 (16:37 IST)

ಕರಿಯ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ (58) ಭಾನುವಾರ ಬೆಳಿಗ್ಗೆ ವಾಕಿಂಗ್‍ಗೆ ತೆರಳಿದಾಗ ಸಂಭವಿಸಿದ ಅಪಘಾತದಲ್ಲಿ ಅವರು ಮರಣವನ್ನಪ್ಪಿದ್ದಾರೆ.

ಭಾನುವಾರ ಬೆಳಿಗ್ಗೆ ಜೆ.ಪಿ.ನಗರದ ನಿವಾಸದ ಬಳಿ ವಾಕಿಂಗ್ ಗೆ ತೆರಳಿದಾಗ ಅಪಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿ ಆಗದೇ ನಿಧನರಾಗಿದ್ದಾರೆ.

ಪ್ರೇಮ್ ನಿರ್ದೇಶನದ `ಕರಿಯಾ’ ಸಿನಿಮಾದ ಯಶಸ್ಸಿನ ನಂತರ ಆನೇಕಲ್ ಬಾಲರಾಜ್ ರವರು ಅನೇಕ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಅವರ ಪುತ್ರ ಸಂತೋಷ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್, ಶ್ರೀದೇವಿ ಪುತ್ರಿಯರ ಜೊತೆ ಅಮಿತಾಭ್ ಮೊಮ್ಮಗನ ಸಿನಿಮಾ