Webdunia - Bharat's app for daily news and videos

Install App

ಒಂದೇ ದಿನ ಶೂಟಿಂಗ್ ಆರಂಭಿಸಲಿರುವ ಕಾಂತಾರ 1, ಟಾಕ್ಸಿಕ್

Krishnaveni K
ಶನಿವಾರ, 13 ಏಪ್ರಿಲ್ 2024 (10:40 IST)
Photo Courtesy: Twitter
ಬೆಂಗಳೂರು: ಕನ್ನಡ ಚಿತ್ರ ಪ್ರೇಮಿಗಳು ಬಹುನಿರೀಕ್ಷೆಯಿಂದ ಕಾದಿರುವ ಸಿನಿಮಾಗಳೆಂದರೆ ಟಾಕ್ಸಿಕ್ ಮತ್ತು ಕಾಂತಾರ ಚಾಪ್ಟರ್ 1 ಸಿನಿಮಾಗಳು. ಈ ಸಿನಿಮಾ ತಂಡದ ಕಡೆಯಿಂದ ಈಗ ಬಿಗ್ ಅಪ್ ಡೇಟ್ ಸಿಕ್ಕಿದೆ.

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾದ ನಾಯಕ. ಕೆಜಿಎಫ್ 2 ರ ಬಿಗ್ ಸಕ್ಸಸ್ ಬಳಿಕ ಯಶ್ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡು ನಟಿಸುತ್ತಿರುವ ಸಿನಿಮಾ ಟಾಕ್ಸಿಕ್. ಈ ಸಿನಿಮಾ ತಂಡ ಒಂದು ಪೋಸ್ಟರ್ ಹರಿಬಿಟ್ಟು ಸಂಚಲನ ಮೂಡಿಸಿತ್ತು. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಯಶ್ ಎಲ್ಲೇ ಹೋದರೂ ಟಾಕ್ಸಿಕ್ ಸಿನಿಮಾ ಯಾವಾಗ ಶುರುವಾಗುತ್ತದೆ ಎಂದು ಕೇಳುತ್ತಲೇ ಇದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ಇದೇ ಏಪ್ರಿಲ್ 15 ರಿಂದ ಟಾಕ್ಸಿಕ್ ಮೂವಿ ಶೂಟಿಂಗ್ ಶುರುವಾಗಲಿದೆ ಎಂಬ ಮಾಹಿತಿ ಬಂದಿದೆ. ವಿಶೇಷವೆಂದರೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ತಂಡ ಕೂಡಾ ಅದೇ ದಿನ ಶೂಟಿಂಗ್ ಆರಂಭಿಸುತ್ತಿದೆ.

ಕಾಂತಾರ ಚಾಪ್ಟರ್ 1 ರ ಶೂಟಿಂಗ್ ನ್ನೂ ರಿಷಬ್ ವಿಷು ಹಬ್ಬದ ಸಂದರ್ಭದಲ್ಲಿ ಏಪ್ರಿಲ್ 15 ರಂದು ಶೂಟಿಂಗ್ ಶುರು ಮಾಡಲಿದ್ದಾರೆ. ಟಾಕ್ಸಿಕ್ ಮೂವಿ ಸಿನಿಮಾ ಶೂಟಿಂಗ್ ಬೆಂಗಳೂರು, ಗೋವಾದಲ್ಲಿ ನಡೆಯಲಿದೆ. ಆದರೆ ಕಾಂತಾರ ಸಿನಿಮಾ ಶೂಟಿಂಗ್ ರಿಷಬ್ ಶೆಟ್ಟಿ ತವರು ಕುಂದಾಪುರದಲ್ಲಿ ಆರಂಭವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ಮುಂದಿನ ಸುದ್ದಿ
Show comments