ದರ್ಶನ್ ಅವರ 'ಒಡೆಯರ್' ಚಿತ್ರಕ್ಕೆ ಕನ್ನಡ ಕ್ರಾಂತಿ ದಳ ವಿರೋಧ!

ಶನಿವಾರ, 24 ಫೆಬ್ರವರಿ 2018 (06:58 IST)
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಲಿರುವ ‘ಒಡೆಯರ್’ ಚಿತ್ರ ಸೆಟ್ಟೆರುವ ಮೊದಲೇ  ಚಿತ್ರದ ಶೀರ್ಷಿಕೆಯ ಕುರಿತು ಬಾರಿ ವಿರೋಧ ವ್ಯಕ್ತವಾಗಿದೆ.


ಸಂದೇಶ್ ನಾಗರಾಜ್ ಅವರ ನಿರ್ಮಾಣದ ಎಂ.ಡಿ ಶ್ರೀಧರ್ ಅವರು ನಿರ್ದೇಶಿಸಲಿರುವ ‘ಒಡೆಯರ್’ ಚಿತ್ರದ ಶೀರ್ಷಿಕೆ, ದರ್ಶನ್ ಅವರ  ಹುಟ್ಟುಹಬ್ಬದ ದಿನದಂದು ಬಹಿರಂಗವಾಗಿತ್ತು. ಆದರೆ ಈಗ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳ ಸುದ್ದಿಗೋಷ್ಠಿ ನಡೆಸಿ ನಾಡು ನುಡಿ ಸೇವೆಗಾಗಿ ಮೈಸೂರು ಒಡೆಯರ್ ವಂಶಸ್ಥರ ಸೇವೆ ಅಪಾರವಾಗಿದೆ. ಹೀಗಾಗಿ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ. ಆದ ಕಾರಣ ಚಿತ್ರದ ಶೀರ್ಷಿಕೆಯನ್ನು ಹಿಂಪಡೆಯುವಂತೆ ತಿಳಿಸಿದೆ. ಒಂದು ವೇಳೆ ಟೈಟಲ್ ಹಿಂಪಡೆಯದಿದ್ದಲ್ಲಿ ಬೆಂಗಳೂರಿನಲ್ಲಿ ದರ್ಶನ್ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಲಕಿಯ ಮುಖಕ್ಕೆ ಬಣ್ಣಹಚ್ಚಿ ತುಟಿಗೆ ಕಿಸ್ ಕೊಟ್ಟ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿರುದ್ದ ದೂರು ದಾಖಲು