ಕನ್ನಡದ 'ನೀರ್ ದೋಸೆ' ಸಿನಿಮಾ ನಿರ್ಮಾಪಕ ಆರ್. ಪ್ರಸನ್ನ ಅರೆಸ್ಟ್

Webdunia
ಗುರುವಾರ, 20 ಸೆಪ್ಟಂಬರ್ 2018 (12:45 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ನವರಸನಾಯಕ ಜಗ್ಗೇಶ್ ಅಭಿನಯಿಸಿರುವ 'ನೀರ್ ದೋಸೆ' ಸಿನಿಮಾದ ನಿರ್ಮಾಪಕ ಆರ್. ಪ್ರಸನ್ನ ಅವರನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.


ನಿರ್ಮಾಪಕ ಆರ್. ಪ್ರಸನ್ನ ಅವರು 2015 ರಲ್ಲಿ ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕಿನಲ್ಲಿ ಮನೆ ಅಡಮಾನವಿಟ್ಟು ಸಾಲ ಪಡೆದಿಕೊಂಡಿದ್ದರು ಎನ್ನಲಾಗಿದ್ದು. ಇದಲ್ಲದೇ ಹೊಸಕೆರೆಹಳ್ಳಿ ಮನೆಯ ಭೂ ದಾಖಲೆಯನ್ನು ಕಲರ್ ಜೆರಾಕ್ಸ್ ಮಾಡಿಸಿ ಮೂರು ಕಡೆ ಸಾಲ ಪಡೆದಿದ್ದರು ಅಂತ ತಿಳಿದು ಬಂದಿದೆ. ಇನ್ನು ಶೇಷಾದ್ರಿಪುರಂನ ಸಿಂಡಿಕೇಟ್ ಬ್ಯಾಂಕ್, ಕಿಲಾರಿ ರಸ್ತೆಯ ದೈವಜ್ಞ ಕೊ ಆಪರೇಟಿವ್ ಸೊಸೈಟಿ ಹಾಗು ಮಾರ್ಗದರ್ಶಿ ಚಿಟ್ಸ್ ನಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.


ಹೀಗೆ ಪ್ರಸನ್ನ ಅವರು ಎಲ್ಲ ಬ್ಯಾಂಕ್ ಗಳಿಗೂ ಒಂದೇ ಆಸ್ತಿ ಪತ್ರ ನೀಡಿ ಒಂದೇ ವಾರದಲ್ಲಿ ಒಂದು ಕೋಟಿ ಸಾಲ ಪಡೆದಿದ್ದರು. ಬ್ಯಾಂಕಿನವರು ಆಸ್ತಿ ಪತ್ರ ಪರಿಶೀಲನೆ ನಡೆಸಿದಾಗ ಕಲರ್ ಜೆರಾಕ್ಸ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಡುತ್ತೀವಿ ಎಂದಾಗ ಎರಡು ಕಂತುಗಳಲ್ಲಿ 17 ಲಕ್ಷ ರೂ. ಹಣ ವಾಪಸ್ ಮಾಡದ್ದರಂತೆ. ಇನ್ನು ಬ್ಯಾಂಕಿಗೆ ಉಳಿದ 17 ಲಕ್ಷ ರೂ. ಚೆಕ್ ನೀಡಿದ್ದರು.


ಆದರೆ ಪ್ರಸನ್ನ ನೀಡಿದ್ದ ಚೆಕ್ ಬೌನ್ಸ್ ಆದಕಾರಣ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ದಾಶಿಕಾ ರಮೇಶ್ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕರ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸರು ನಿರ್ಮಾಪಕ ಪ್ರಸನ್ನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಮುಂದಿನ ಸುದ್ದಿ
Show comments