ಜಿಎಸ್ ಟಿ ದರ ಕಡಿತವಾದ್ರೂ ಕನ್ನಡ ಸಿನಿಮಾ ವೀಕ್ಷಕರಿಗೆ ಲಾಭವಿಲ್ಲ
ಬೆಂಗಳೂರು , ಗುರುವಾರ, 4 ಸೆಪ್ಟಂಬರ್ 2025 (14:13 IST)
ಬೆಂಗಳೂರು: ಕೇಂದ್ರ ಸರ್ಕಾರ ಇದೀಗ ಹಲವು ವಸ್ತುಗಳ ಮೇಲಿನ ಜಿಎಸ್ ಟಿ ದರ ಕಡಿತಗೊಳಿಸಿ ಜನತೆಗೆ ಉಡುಗೊರೆ ನೀಡಿದೆ. ಆದರೆ ಇದು ಕನ್ನಡ ಸಿನಿಮಾ ವೀಕ್ಷಕರಿಗೆ ಪ್ರಯೋಜನವಾಗಲ್ಲ. ಯಾಕೆ ಗೊತ್ತಾ?
ಜಿಎಸ್ ಟಿ ಸಮಿತಿ ಸಭೆಯಲ್ಲಿ ಜಿಎಸ್ ಟಿ ಸ್ಲ್ಯಾಬ್ ಗಳನ್ನು ಎರಡಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ 12% ಮತ್ತು 28% ಸ್ಲ್ಯಾಬ್ ರದ್ದಾಗಿದೆ. ಇದರ ಪರಿಣಾಮ ಇದರಡಿಯಲ್ಲಿ ಬರುವ ವಸ್ತುಗಳ ಬೆಲೆ ಇನ್ನು ಕೊಂಚ ಕಡಿತವಾಗಲಿದೆ.
ಸಿನಿಮಾ ರಂಗವೂ ಜಿಎಸ್ ಟಿ ಕಡಿತಕ್ಕೆ ಮನವಿ ಮಾಡಿತ್ತು. ಅದರಂತೆ ಸಿನಿಮಾ ಟಿಕೆಟ್ ಗಳ ಮೇಲಿನ ಜಿಎಸ್ ಟಿ ದರದಲ್ಲಿ ಬದಲಾವಣೆಯಾಗಿದೆ. ಆದರೆ ಇದರಿಂದ ಕರ್ನಾಟಕದ ಅಥವಾ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಲಾಭವಾಗುವ ಸಾಧ್ಯತೆಯಿಲ್ಲ.
ಇದೀಗ 100 ರೂ. ಒಳಗಿನ ಸಿನಿಮಾ ಟಿಕೆಟ್ ದರದ ಜಿಎಸ್ ಟಿಯನ್ನು ಈ ಹಿಂದೆ ಇದ್ದ ಶೇ.12 ರಿಂದ ಶೇ.5 ಕ್ಕೆ ಇಳಿಕೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ 100 ರೂ. ಒಳಗೆ ಟಿಕೆಟ್ ದರವಿರುವ ಥಿಯೇಟರ್ ಗಳು ತೀರಾ ವಿರಳ. ಹೆಚ್ಚಾಗಿ ತಮಿಳುನಾಡು, ಕೇರಳ, ಆಂಧ್ರದಲ್ಲಿ ಇಂತಹ ಥಿಯೇಟರ್ ಗಳಿವೆ. ಹೀಗಾಗಿ ಆ ರಾಜ್ಯಗಳಿಗೆ ಇದರಿಂದ ಲಾಭವಾಗಲಿದೆ. ಅದನ್ನು ಹೊರತುಪಡಿಸಿದರೆ 100 ರೂ. ಗಿಂತ ಮೇಲ್ಪಟ್ಟ ಸಿನಿಮಾ ಟಿಕೆಟ್ ದರದ ಮೇಲಿನ ಶೇ.18 ರಷ್ಟು ಜಿಎಸ್ ಟಿ ದರ ಎಂದಿನಂತೇ ಮುಂದುವರಿಯಲಿದೆ. ಹೀಗಾಗಿ ಇದರ ಲಾಭ ಕರ್ನಾಟಕದ ವೀಕ್ಷಕರಿಗೆ ಆಗದು.
ಮುಂದಿನ ಸುದ್ದಿ