Select Your Language

Notifications

webdunia
webdunia
webdunia
webdunia

ಸದ್ದು ಮಾಡ್ತಿದೆ ಮಿಂಚಿನ ಬಳ್ಳಿ ಸಾಂಗ್..!!!

ಸದ್ದು ಮಾಡ್ತಿದೆ ಮಿಂಚಿನ ಬಳ್ಳಿ ಸಾಂಗ್..!!!
ಬೆಂಗಳೂರು , ಬುಧವಾರ, 12 ಫೆಬ್ರವರಿ 2020 (14:19 IST)
ವಿಕಾಸ್, ಸಿಂಧು ಲೋಕನಾಥ್ ಅಭಿನಯದ ‘ಕಾಣದಂತೆ ಮಾಯವಾದನು’ ಚಿತ್ರ ಬಿಡುಗಡೆಯಾಗಿ  ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರಕಥೆ ಹಾಗೂ ಹೊಸತನದಿಂದ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಚಿತ್ರದಲ್ಲಿ ಬರುವ ಮಿಂಚಿನ ಬಳ್ಳಿ ಹಾಡು ಚಿತ್ರಮಂದಿರದಿಂದ ಆಚೆ ಬಂದ ಮೇಲೆ ಎಲ್ಲರನ್ನು ಕಾಡಿತ್ತು. ಇದೀಗ ಚಿತ್ರತಂಡ ಮಿಂಚಿನ ಬಳ್ಳಿ ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದು, ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 
ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಈ ಹಾಡಿಗಿದ್ದು, ಅಶ್ವಿನ್ ಶರ್ಮಾ, ಸಂಗೀತ ರವೀಂದ್ರನಾಥ್ ದನಿಯಾಗಿರೋ ಈ ಹಾಡಿಗೆ ಸಂಗೀತ ನಿರ್ದೇಶಕ ಗುಮ್ಮಿನೇನಿ ವಿಜಯ್ ಸೊಗಸಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಬಿ. ಧನಂಜಯ್ ಅಷ್ಟೇ ಚೆನ್ನಾಗಿ ಹಾಡನ್ನು ತೆರೆ ಮೇಲೆ ಚೆಂದಗಾಣಿಸಿದ್ದಾರೆ.
webdunia

ಎಲ್ಲರನ್ನು ಮೋಡಿ ಮಾಡಿರೋ ಈ ಹಾಡನ್ನು ಗಾನ ಪ್ರಿಯರು ರಿಪೀಟ್ ಮೂಡ್ನಲ್ಲಿ ಕೇಳಿ ಎಂಜಾಯ್ ಮಾಡುತ್ತಿದ್ದಾರೆ. ‘ಕಾಣದಂತೆ ಮಾಯವಾದನು’ ಚಿತ್ರವನ್ನು ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು ಜನವರಿ ಕೊನೆ ವಾರ ಚಿತ್ರ ಬಿಡುಗಡೆಯಾಗಿ ಸಖತ್ ಟಾಕ್ ಕ್ರಿಯೇಟ್ ಮಾಡಿತ್ತು. ಇದೀಗ ಚಿತ್ರದ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು ಸಖತ್ ಸೌಂಡ್ ಮಾಡ್ತಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಳಿಕ ಪುನೀತ್ ರಾಜಕುಮಾರ್ ಭೇಟಿ ಮಾಡಿದ ಚಂದನ್ ಶೆಟ್ಟಿ: ಕಾರಣವೇನು ಗೊತ್ತಾ?