Select Your Language

Notifications

webdunia
webdunia
webdunia
webdunia

19 ನಾಯಕಿಯರ ಜತೆ ಜಗ್ಗೇಶ್ ಹಾಡು: ಇಂದು ಬಿಡುಗಡೆ

19 ನಾಯಕಿಯರ ಜತೆ ಜಗ್ಗೇಶ್ ಹಾಡು: ಇಂದು ಬಿಡುಗಡೆ
ಬೆಂಗಳೂರು , ಬುಧವಾರ, 13 ನವೆಂಬರ್ 2019 (09:22 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಸ್ಟ್ರು ಸಿನಿಮಾ ಹಲವು ಕಾರಣಕ್ಕೆ ವೀಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಈ ಸಿನಿಮಾದ ಹಾಡೊಂದು ಇಂದು ಬಿಡುಗಡೆಯಾಗುತ್ತಿದೆ.


ಇದರ ವಿಶೇಷತೆಯೇನೆಂದರೆ ಈ ಹಾಡಿನಲ್ಲಿ ಜಗ್ಗೇಶ್ ಜತೆಗೆ 19 ನಾಯಕಿಯರು ಅಭಿನಯಿಸಿದ್ದಾರೆ. ಇದು ಕನ್ನಡದ ಕುರಿತಾದ ಹಾಡಾಗಿದ್ದು, ಈ ವಿಶೇಷ ಹಾಡಿಗೆ ಸ್ಯಾಂಡಲ್ ವುಡ್ ನ 19 ನಾಯಕಿಯರು ಹೆಜ್ಜೆ ಹಾಕಿದ್ದಾರೆ. ಹರಿಪ್ರಿಯಾ, ಅಮೂಲ್ಯ, ಶುಭ ಪೂಂಜಾ, ರಾಗಿಣಿ ದ್ವಿವೇದಿ ಸೇರಿದಂತೆ 19 ನಾಯಕಿಯರು ಈ ಹಾಡಿನಲ್ಲಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಈ ಹಾಡಿನ ಲಿರಿಕಲ್ ವಿಡಿಯೋ ಲಾಂಚ್ ಆಗುತ್ತಿದೆ. ನೈಜ ಘಟನೆಯ ಆಧಾರಿತ ಸಿನಿಮಾ ಇದಾಗಿದ್ದು ನವಂಬರ್ 22 ಕ್ಕೆ ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾದ ಗಾಯಕಿ ಲತಾ ಮಂಗೇಶ್ಕರ್