Webdunia - Bharat's app for daily news and videos

Install App

ಕಾಟೇರ ಪ್ರಿ ರಿಲೀಸ್ ಕಾರ್ಯಕ್ರಮ ಎಲ್ಲಿ? ಯಾವಾಗ? ಡೀಟೈಲ್ಸ್ ಇಲ್ಲಿದೆ

Webdunia
ಗುರುವಾರ, 14 ಡಿಸೆಂಬರ್ 2023 (08:56 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಟ್ರೈಲರ್ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ.

ಈ ದಿನ ಕೇವಲ ಟ್ರೈಲರ್ ರಿಲೀಸ್ ಮಾತ್ರವಲ್ಲ, ಇದನ್ನು ಪ್ರಿ ರಿಲೀಸ್ ಕಾರ್ಯಕ್ರಮವಾಗಿ ಚಿತ್ರತಂಡ ಅದ್ಧೂರಿಯಾಗಿ ಜನರ ಮುಂದೆಯೇ ಸಂಭ್ರಮಾಚರಿಸಲಿದೆ. ದರ್ಶನ್ ಎಂದರೆ ಮಾಸ್ ಹೀರೋ. ಅವರ ಕಾರ್ಯಕ್ರಮಕ್ಕೆ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ.

ಕಾಟೇರ ಚಿತ್ರದ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ಡಿಸೆಂಬರ್ 16 ರಂದು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಅಲ್ಲಿಯೆ ಟ್ರೈಲರ್ ಕೂಡಾ ರಿಲೀಸ್ ಆಗುತ್ತಿದೆ. ಹುಬ್ಬಳ್ಳಿಯ ಕೇಶ‍್ವಾಪೂರ ರಸ್ತೆ, ರೈಲ್ವೆ ಮೈದಾನದಲ್ಲಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಡೆಯಲಿದೆ. ಶನಿವಾರ 4 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ.

ಆ ದಿನ ಹುಬ್ಬಳ್ಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ. ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದಾರೆ. ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ದರ್ಶನ್ ಕೈದಿ ನಂಬರ್ ಎಷ್ಟು, ಟ್ಯಾಟೂ ಹಾಕಿಸಿಕೊಳ್ಳುವ ಡಿಬಾಸ್ ಫ್ಯಾನ್ಸ್ ನೋಡ್ಕೊಳ್ಳಿ

ಜೈಲಿನಲ್ಲೂ ಸ್ನೇಹಿತರ ಜೊತೆಗೆ ದರ್ಶನ್, ಪವಿತ್ರಾ ಗೌಡ ಎಲ್ಲಿದ್ದಾರೆ

ದರ್ಶನ್ ಜೈಲು ಸೇರುವಂತೆ ಮಾಡಿದ ಆ ಮೂವರು ಯಾರೆಲ್ಲಾ ನೋಡಿ

ದರ್ಶನ್ ಮತ್ತೆ ಜೈಲು ಪಾಲಾದ್ರೂ ಸೈಲೆಂಟ್ ಆದ ಫ್ಯಾನ್ಸ್

ಮುಂದಿನ ಸುದ್ದಿ
Show comments