Daily Horoscope
✕

ರಿಲೀಸ್ ಗೂ ಎರಡು ವಾರ ಮೊದಲೇ ಥಿಯೇಟರ್ ಗಳ ಮುಂದೆ ಕಾಟೇರ ಅಬ್ಬರ

Webdunia
ಬುಧವಾರ, 13 ಡಿಸೆಂಬರ್ 2023 (14:54 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅಭಿಮಾನಿಗಳಲ್ಲಿರುವ ಕ್ರೇಜ್ ಲೆವೆಲ್ ಬೇರೆಯೇ ಆಗಿರುತ್ತದೆ.

ಇದೀಗ ಕಾಟೇರ ಸಿನಿಮಾ ಬಿಡುಗಡೆಗೂ ಮೊದಲೇ ಕಟೌಟ್ ಅಬ್ಬರ ಶುರುವಾಗಿದೆ. ದರ್ಶನ್ ನಾಯಕರಾಗಿ ನಟಿಸಿರುವ ತರುಣ್ ಸುಧೀರ್ ನಿರ್ದೇಶನದ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾ ಬಿಡುಗಡೆ ಇನ್ನೂ ಎರಡು ವಾರಕ್ಕೂ ಹೆಚ್ಚು ಸಮಯವಿದೆ. ಆದರೆ ಆಗಲೇ ಥಿಯೇಟರ್ ಗಳ ಮುಂದೆ ದರ್ಶನ್ ಬೃಹತ್ ಕಟೌಟ್ ಗಳು ರಾರಾಜಿಸುತ್ತಿದ್ದು, ಕಾಟೇರ ಅಬ್ಬರ ಈಗಲೇ ಶುರುವಾಗಿದೆ.

ದರ್ಶನ್ ರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯತ್ತಾರೆ. ಅವರಿಗಿರುವ ಫ್ಯಾನ್ ಬೇಸ್ ಇದಕ್ಕೆ ಕಾರಣ. ಹೀಗಾಗಿ ಕಾಟೇರ ಸಿನಿಮಾವೂ ಬಿಗ್ ಬಜೆಟ್ ಸಿನಿಮಾ ರಿಲೀಸ್ ಗಳ ನಡುವೆ ರಿಲೀಸ್ ಆಗುತ್ತಿದ್ದರೂ ಕರ್ನಾಟಕ ಮಾರುಕಟ್ಟೆಯಲ್ಲಿ ಡಿ ಬಾಸ್ ಹವಾ ನಡೆಯಬಹುದು ಎಂಬ ಲೆಕ್ಕಾಚಾರವಿದೆ. ಈ ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ದರ್ಶನ್ ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ನಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಕ್ಸಸ್ ಅಂದ್ರೆ ಹೀಗಿರ್ಬೇಕು…ಪ್ರೇಮದ ಊರಲಿ ಸಿನಿಮಾ 100 ಕೋಟಿ ಕ್ಲಬ್ ಗೆ ಸೇರ್ಪಡೆ

BBK13: ಗೆಳೆಯ ಎನ್ನುತ್ತಲೇ ತಾಂಡವ್ ಬೆನ್ನಿಗೆ ಚೂರಿ ಹಾಕಿದ್ರಾ ಗಗನ್… ಕಣ್ಣೀರಾದ ಕುಚಿಕು

ಬೇಗ ಓಡು ಟೈಗರ್…ಪ್ರಾಣದ ಹಂಗು ತೊರೆದು ಚಾಲಕನ ಜೀವ ಉಳಿಸಿದ ಟೈಗರ್ ಶ್ರಾಫ್: Video

ಕಣ್ಮುಚ್ಚಿ ಹೊಡೆಯುವಷ್ಟರಲ್ಲಿ ತೀರಾ ಸನಿಹದಿಂದಲೇ ಬಿತ್ತು ಗುಂಡು: ಟೈಗರ್ ಶ್ರಾಫ್ ಗುಂಡಿನ ದಾಳಿಯ ಭೀಕರ ವಿಡಿಯೋ ವೈರಲ್

BBK13: ಒಂದು ಸೀಸನ್ ನಲ್ಲಿ ಒಬ್ರು ಇಬ್ರು ದಡ್ಡರಿದ್ರೆ ಓಕೆ, ಇಷ್ಟೂ ಇಲ್ವಾ ತಲೆಯಲ್ಲಿ: ಮನೆಮಂದಿಗೆ ಕಿಚ್ಚನ ಕ್ಲಾಸ್

ಮುಂದಿನ ಸುದ್ದಿ
Show comments