Select Your Language

Notifications

webdunia
webdunia
webdunia
Tuesday, 8 April 2025
webdunia

ಒಂದೇ ಫೋಟೋಗೆ ದಾಖಲೆ ಮಾಡಿದ ಯಶ್ ಪುತ್ರ! ಜ್ಯೂನಿಯರ್ ಯಶ್ ಬಗ್ಗೆ ತೆಲುಗು ಸ್ಟಾರ್ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್
ಬೆಂಗಳೂರು , ಶುಕ್ರವಾರ, 1 ಮೇ 2020 (10:25 IST)
ಬೆಂಗಳೂರು: ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ತಮ್ಮ ಪುತ್ರನ ಫೋಟೋವನ್ನು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.


ರಾಕಿಂಗ್ ಜೋಡಿ ತಮ್ಮ ಮುದ್ದಿನ ಮಗನ ಫೋಟೋ ಪ್ರಕಟಿಸುತ್ತಿದ್ದಂತೇ ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್ ಮಾಡಿದ್ದಾರೆ. ಈ ಮೂಲಕ ಯಶ್ ಟ್ವಿಟರ್ ನಲ್ಲಿ ಪುತ್ರನ ಫೋಟೋಗೆ 33 ಸಾವಿರಕ್ಕೂ ಅಧಿಕ ಲೈಕ್ ಪಡೆದಿದ್ದರೆ ಇನ್ ಸ್ಟಾಗ್ರಾಂ ಪುಟದಲ್ಲಿ 8 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

ಈ ನಡುವೆ ಯಶ್ ಪುತ್ರನ ಫೋಟೋಗೆ ಅಭಿಮಾನಿಗಳು ಮಾತ್ರವಲ್ಲ ಸ್ಟಾರ್ ಗಳೂ ಫಿದಾ ಆಗಿದ್ದಾರೆ. ಜ್ಯೂನಿಯರ್ ಮುದ್ದು ಮಗನ ಫೋಟೋ ನೋಡಿ ತೆಲುಗು ಸ್ಟಾರ್ ನಟ ಅಖಿಲ್ ಅಕ್ಕಿನೇನಿ ಕಾಮೆಂಟ್ ಮಾಡಿದ್ದು, ಅಪ್ಪನಂತೇ ಆಗ್ತೀಯಾ ಎಂದು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಮಿಕರ ದಿನಕ್ಕೆ ‘ರಾಬರ್ಟ್’ ಮೇಕಿಂಗ್ ವಿಡಿಯೋ ಕೊಡುಗೆ ನೀಡಿದ ದರ್ಶನ್