Publish Date: Mon, 17 Oct 2022 (08:30 IST)
Updated Date: Mon, 17 Oct 2022 (08:36 IST)
ಹೈದರಾಬಾದ್: ಆರ್ ಆರ್ ಆರ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ಜ್ಯೂ.ಎನ್ ಟಿಆರ್ ಅಲಿಯಾಸ್ ನಟ ತಾರಕ್ ಹೆಸರು ಈ ಮೊದಲು ಫೇಮಸ್ ನಟಿಯೊಬ್ಬರ ಜೊತೆ ಥಳುಕು ಹಾಕಿಕೊಂಡಿತ್ತು.
2006 ರಲ್ಲಿ ನಟಿ ಸಮೀರಾ ರೆಡ್ಡಿ ಜೊತೆ ತಾರಕ್ ಹೆಸರು ಲಿಂಕ್ ಅಪ್ ಆಗಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಹುಟ್ಟಿಕೊಂಡಿತ್ತು. ಆದರೆ ಸಮೀರಾ ಸಂದರ್ಶನವೊಂದರಲ್ಲಿ ನಾವಿಬ್ಬರೂ ಲವ್ ಮಾಡುತ್ತಿರಲಿಲ್ಲ. ಆದರೆ ನಮ್ಮ ಬಗ್ಗೆ ಕೇಳಿಬರುತ್ತಿದ್ದ ಗಾಸಿಪ್ ನಿಂದ ಬೇಸತ್ತಿದ್ದಾಗಿ ಹೇಳಿಕೊಂಡಿದ್ದರು.
2011 ರಲ್ಲಿ ತಾರಕ್ ಲಕ್ಷ್ಮಿ ಪ್ರಣತಿ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರಿಗೆ ಅಭಯ್ ಮತ್ತು ಭಾರ್ಗವ್ ಎಂಬ ಇಬ್ಬರು ಪುತ್ರರಿದ್ದಾರೆ.
-Edited by Rajesh Patil