ಜ್ಯೂ.ಎನ್ ಟಿಆರ್ ದೇವರ ಸಿನಿಮಾದ ಲುಕ್ ಸೇಮ್ ಟು ಸೇಮ್ ರಿಷಬ್ ಶೆಟ್ಟಿಯಂತಿದೆ!

Krishnaveni K
ಶನಿವಾರ, 23 ಮಾರ್ಚ್ 2024 (11:20 IST)
Photo Courtesy: Twitter
ಹೈದರಾಬಾದ್: ಜ್ಯೂ.ಎನ್ ಟಿಆರ್ ಮತ್ತು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ಒಂದು ರೀತಿಯಲ್ಲಿ ಹೋಲಿಕೆಯಿದೆ. ಗಡ್ಡ ಬಿಟ್ಟುಕೊಂಡರೆ ಇಬ್ಬರೂ ಒಂದೇ ಥರಾ ಕಾಣಿಸ್ತಾರೆ ಎಂದು ಹಲವು ಬಾರಿ ನೆಟ್ಟಿಗರು ಹೇಳಿದ್ದಿದೆ.

ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಜ್ಯೂ.ಎನ್ ಟಿಆರ್ ನಾಯಕರಾಗಿರುವ ದೇವರ ಸಿನಿಮಾದ ಫೋಟೋವೊಂದು ಆನ್ ಲೈನ್ ನಲ್ಲಿ ಪ್ರಕಟವಾಗಿದೆ. ಈ ಫೋಟೋದಲ್ಲಿ ಜ್ಯೂ.ಎನ್ ಟಿಆರ್ ಸೇಮ್ ಟು ಸೇಮ್ ಕಾಂತಾರದಲ್ಲಿ ರಿಷಬ್ ಶೆಟ್ಟಿ ಕಾಣಿಸಿದಂತೇ ಕಾಣುತ್ತಿದ್ದಾರೆ.

ಕುರುಚಲು ಗಡ್ಡ, ಗುಂಗುರು ಕೂದಲು, ಹೆಗಲ ಮೇಲೊಂದು ಶಾಲು ಹಾಕಿಕೊಂಡು ರಿಷಬ್ ಕಾಂತಾರದಲ್ಲಿ ಹೇಗೆ ಕಾಣಿಸ್ತಿದ್ದಾರೋ ಅದೇ ರೀತಿ ಜ್ಯೂ.ಎನ್ ಟಿಆರ್ ದೇವರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿ ನೆಟ್ಟಿಗರು ಇದು ರಿಷಬ್ ಶೆಟ್ಟಿನಾ ಅಂತ ಕನ್ ಫ್ಯೂಸ್ ಮಾಡಿಕೊಂಡಿದ್ದಾರೆ.

ಗೋವಾದಲ್ಲಿ ದೇವರ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಜ್ಯೂ.ಎನ್ ಟಿಆರ್ ಇರುವ ಫೋಟೋ ಇದಾಗಿದೆ. ಇದನ್ನು ನೋಡಿ ಜ್ಯೂ.ಎನ್ ಟಿಆರ್ ಕಾಂತಾರ 2 ಸೆಟ್ ಗೆ ಬಂದಿದ್ದಾರೆ ಎಂದು ಹಲವರು ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಹೇಮಾ ಮಾಲಿನಿ ಚುನಾವಣೆಗೆ ನಿಂತಿದ್ದಾಗ ಧರ್ಮೇಂದ್ರರಿಂದ ಕರೆ ಬಂದಿತ್ತು: ಅಮಿತ್ ಶಾ ನೆನಪು

ದರ್ಶನ್ ರಾಜಕೀಯ ಎಂಟ್ರಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಹೋದರ ದಿನಕರ್‌

ದರ್ಶನ್ ಡೆವಿಲ್ ಮೂವಿ ರಿಲೀಸ್: ಪತಿ ಮಾಡಬೇಕಾದ ಕೆಲಸವನ್ನು ಮಗನ ಜೊತೆ ಮಾಡಿದ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ಮುಂದಿನ ಸುದ್ದಿ
Show comments