ಕೋಲಾರದಲ್ಲಿ ಆಸ್ತಿ ಖರೀದಿಗೆ ಬಂದ ನಟ ಪ್ರಭುದೇವಗೆ ಫ್ಯಾನ್ಸ್ ಮುತ್ತಿಗೆ

Krishnaveni K
ಶುಕ್ರವಾರ, 22 ಮಾರ್ಚ್ 2024 (12:22 IST)
Photo Courtesy: Twitter
ಕೋಲಾರ: ಬಹುಭಾಷಾ ನಟ, ಕನ್ನಡಿಗ ಪ್ರಭುದೇವ ಆಸ್ತಿ ಖರೀದಿ ವಿಚಾರವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಅವರನ್ನು ಫ್ಯಾನ್ಸ್ ಮುತ್ತಿಕೊಂಡಿದ್ದಾರೆ.

ಆಸ್ತಿ ನೋಂದಣಿ ವಿಚಾರವಾಗಿ ಅವರು ಬಂಗಾರಪೇಟೆ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಅವರ ಜೊತೆ ಸೆಲ್ಫೀ ತೆಗೆದುಕೊಳ್ಳಲು ಫ್ಯಾನ್ಸ್ ಮುತ್ತಿಗೆ ಹಾಕಿದ್ದಾರೆ. ಮೂಲತಃ ಮೈಸೂರು ಮೂಲದವರಾದ ಪ್ರಭುದೇವ ಪರಭಾಷೆಗಳಲ್ಲಿ ಮಿಂಚಿದರೂ ಈಗಲೂ ಕರ್ನಾಟಕದ ಜೊತೆ ನಂಟು ಉಳಿಸಿಕೊಂಡಿದ್ದಾರೆ.

ಈಗಲೂ ಪ್ರಭುದೇವ ಕನ್ನಡ ಪ್ರೀತಿ ಇಟ್ಟುಕೊಂಡಿದ್ದಾರೆ. ಇಲ್ಲಿ ಈಗಲೂ ಅವರ ಕುಟುಂಬಸ್ಥರ ಆಸ್ತಿ-ಪಾಸ್ತಿಯಿದೆ. ಇದೀಗ ಕೋಲಾರದಲ್ಲಿ ಪ್ರಭುದೇವ ಆಸ್ತಿ ಖರೀದಿ ಮಾಡಿದ್ದಾರೆ. ಅದರ ನೋಂದಣಿ ಸಂಬಂಧವಾಗಿ ತಮ್ಮ ಸಂಗಡಿಗರೊಂದಿಗೆ ಚಿನ್ನದ ನಾಡಿಗೆ ಬಂದಿದ್ದರು.

ಇತ್ತೀಚೆಗೆ ಪ್ರಭುದೇವ-ಶಿವರಾಜ್ ಕುಮಾರ್  ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಸಿನಿಮಾ ಬಿಡುಗಡೆಯಾಗಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಅವರು ಕರ್ನಾಟಕದಲ್ಲೇ ಆಸ್ತಿ ಖರೀದಿಸಿರುವುದು ವಿಶೇಷವಾಗಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments