ತಿರುವನಂತಪುರಂ:ತಮಿಳು ಮತ್ತು ಮಲೆಯಾಳಂ ನಟಿ ಅರುಂಧತಿ ನಾಯರ್ ಆರು ದಿನಗಳ ಹಿಂದೆ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಇದೀಗ ಅವರ ಕುಟುಂಬ ಅವರ ಮುಂದಿನ ಚಿಕಿತ್ಸೆಗಾಗಿ ಜನರಿಂದ ಆರ್ಥಿಕ ಸಹಾಯವನ್ನು ಕೇಳಿದೆ.
									
			
			 
 			
 
 			
					
			        							
								
																	ಅರುಂಧತಿಯ ಆಪ್ತ ಸ್ನೇಹಿತೆ ನಟಿ ರಮ್ಯಾ ಜೋಸೆಫ್ ಅವರು ಸಾಮಾಜಿಕ ಜಾಲತಾಣದಲ್ಲಿ  ಅರುಂಧತಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯ ಬಿಲ್‌ಗಳನ್ನು ಪಾವತಿಸಲು ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ.
									
										
								
																	ರಮ್ಯಾ ಜೋಸೆಫ್ ಅವರು ಈ ಸಂಬಂಧ ಮಾಧ್ಯಮದ ಜತೆ ಮಾತನಾಡಿ,  ಆರ್ಥಿಕ ಸಹಾಯದ ಅಗತ್ಯವಿರುವ ಕುಟುಂಬದ ಸ್ಥಿತಿ ತಿಳಿದ ನಂತರವೂ ತಮಿಳು ಚಿತ್ರರಂಗದಿಂದ ಯಾವುದೇ ಸಹಾಯ ಬಂದಿಲ್ಲ.  ಅರುಂಧತಿ ಅವರ ಬ್ರೈನ್ ಡೆಡ್ ಆಗಿರುವ ಶಂಕೆ ಇದೆ ಎಂದು ವೈದ್ಯರು ಹೇಳಿದ್ದಾರೆ.
									
											
							                     
							
							
			        							
								
																	ಚಿತ್ರರಂಗದಿಂದ ಇದುವರೆಗೆ ಅವರ ಆರೋಗ್ಯವನ್ನು ವಿಚಾರಿಸಲು ಯಾರು ಮುಂದೆ ಬಂದಿಲ್ಲ.
ಅರುಂಧತಿಯ ಸಹೋದರಿ ಆರತಿ ಅವರು ಶಸ್ತ್ರಚಿಕಿತ್ಸೆಯ ಬಿಲ್ ಅನ್ನು ಪಾವತಿಸಲು ಸಹಾಯ ಮಾಡಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
									
			                     
							
							
			        							
								
																	ಅರುಂಧತಿ ಅವರ ತಲೆಗೆ ತೀವ್ರವಾಗಿ ಗಾಯವಾಗಿದೆ. ಎರಡು ದಿನಗಳ ಹಿಂದಿನವರೆಗೂ ಅರುಂಧತಿಯ ಮೆದುಳಿನಿಂದ ಯಾವುದೇ ಸಿಗ್ನಲ್ ಇರಲಿಲ್ಲ, ಆದರೆ ಎಡ ಕಾರ್ನಿಯಾದಲ್ಲಿ ನಿನ್ನೆ ಸ್ವಲ್ಪ ಚಲನೆ ಕಂಡುಬಂದಿದೆ ಮತ್ತು ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸುತ್ತಿದ್ದಾರೆ ಎಂದು ಆರತಿ ಬಹಿರಂಗಪಡಿಸಿದ್ದಾರೆ.