Select Your Language

Notifications

webdunia
webdunia
webdunia
Tuesday, 8 April 2025
webdunia

ನಟರ ಮೇಲೆ ಅಂಧಾಭಿಮಾನವಿರಬಾರದು: ಕಿಚ್ಚನ ಬಗ್ಗೆ ಅಸಮಾಧಾನ ಹೊರಹಾಕಿದ ನಟಿ ಚಿತ್ರಾಲಿ ರಂಗಸ್ವಾಮಿ

Actor KicchaSudeepa

Sampriya

ಬೆಂಗಳೂರು: , ಗುರುವಾರ, 21 ಮಾರ್ಚ್ 2024 (15:56 IST)
Photo Courtesy X
ಬೆಂಗಳೂರು:  ನಟ ಸುದೀಪ್ ಅವರು ಇಂಟರ್‌ವ್ಯೂವ್‌ನಲ್ಲಿ ನಡೆದುಕೊಳ್ಳುವ ಹಾಗೆಯೇ ನಿಜಜೀವನದಲ್ಲೂ ಇದ್ದರೆ  ಇನ್ನೂ ಚೆನ್ನಾಗಿರುತ್ತದೆ ಎಂದು ನಟಿ ಚಿತ್ರಾಲಿ ರಂಗಸ್ವಾಮಿ ಅವರು ಕಿಚ್ಚನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಗ್‌ಬಾಸ್‌ ಸೀಸನ್ 10ರ ವೇದಿಕೆಗೆ ನನ್ನನ್ನು ಕರೆದು ಯಾಕೆ ರಿಜೆಕ್ಟ್  ಮಾಡಿದ್ರೂ ಎಂಬುದರ ಬಗ್ಗೆ ಇಂದಿಗೂ ಸ್ಪಷ್ಟಣೆ ಸಿಕ್ಕಿಲ್ಲ. ಈ ಬಗ್ಗೆ ಸುದೀಪ್ ಅವರು ಮೌನವಹಿಸಿದ್ದು ನನಗೆ ತುಂಬಾನೇ ನೋವಾಗಿದೆ ಎಂದರು.

ಅಂತಹ ದೊಡ್ಡ ನಟನಾಗಿ ನನ್ನನ್ನು ರಿಜೆಕ್ಟ್  ಮಾಡಿದರ ಬಗ್ಗೆ ಯಾವುದೇ ಪ್ರಶ್ನೆಯನ್ನು ಎತ್ತಿಲ್ಲ. ನಾನು ಬಿಗ್‌ಬಾಸ್‌ ತಂಡಕ್ಕೆ ನನ್ನ ನ್ಯಾಶನಲ್  ಲೆವೆಲ್‌ ಬಾಡಿ ಬಿಲ್ಡಿಂಗ್‌ ಪ್ರದರ್ಶನದ ವಿಡಿಯೋವನ್ನು ಕಳುಹಿಸಿದ್ದೆ. ಆದರೆ ಅವರು ಇನ್‌ಸ್ಟಾಗ್ರಾಂನ ವಿಡಿಯೋವನ್ನು ಹಾಕಿ ನನ್ನನ್ನು ಕೇವಲವಾಗಿ ತೋರಿಸಿದ್ದಾರೆ.

ಇನ್ನು ಆಯ್ಕೆ ಸಂದರ್ಭದ ವೇಳೆ ರಾತ್ರಿ ಮೂರು ಗಂಟೆಗೆ ಚಕ್ರಾಸನ, ಫುಶ್‌ ಅಪ್ ಮಾಡಕ್ಕೆ ಹೇಳಿದ್ದಾರೆ. ಎಲ್ಲನೂ ಮಾಡಿ, ಕೊನೆಗೆ ಕಾರಣವಿಲ್ಲದೆ ರಿಜೆಕ್ಟ್‌ ಮಾಡಿರುವುದು ನೋವಾಗಿದೆ.  

ಇನ್ನೂ ಸುದೀಪ್ ಅವರ ಅಭಿಮಾನಿಯಾಗಿರುವ ನನಗೆ ಅವರು ಆ ವೇದಿಕೆಯಲ್ಲಿ ನಡೆದುಕೊಂಡ ರೀತಿ ನೋವು ಕೊಟ್ಟಿದೆ.  ಸುದೀಪ್ ಮೇಲೆ ತುಂಬಾನೇ ಭರವಸೆ ಇತ್ತು. ಅವರು ಇದ್ದ ಕಡೆ ಯಾರಿಗೂ ಅನ್ಯಾಯವಾಗಲ್ಲ ಅಂತಾ. ಆದರೆ ನನ್ನ ವಿಚಾರದಲ್ಲಿ  ಆ ರೀತಿ ನಡೆದಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಿಲೀಸ್‌ಗೂ ಮುನ್ನ ದೊಡ್ಡ ಮೊತ್ತಕ್ಕೆ ಒಟಿಟಿ ಪಾಲಾದ ಕಾಂತಾರ ಪ್ರೀಕ್ವೆಲ್‌