Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕೊರಿಯಾಗ್ರಾಫರ್ ಜಾನಿ ಮಾಸ್ಟರ್ ಗೆ ಶಾಕ್

Johnny Master

Krishnaveni K

ಹೈದರಾಬಾದ್ , ಸೋಮವಾರ, 7 ಅಕ್ಟೋಬರ್ 2024 (11:10 IST)
ಹೈದರಾಬಾದ್: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕೊರಿಯಾಗ್ರಾಫರ್ ಜಾನಿ ಮಾಸ್ಟರ್ ಗೆ ಸರ್ಕಾರ ಪ್ರಶಸ್ತಿಯನ್ನೇ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ.

ಜಾನಿ ಮಾಸ್ಟರ್ ಗೆ ತಿರುಚಿತ್ರಂಬಲಂ ಸಿನಿಮಾದ ಮೇಘಂ ಕರುಕಥ ಹಾಡಿನ ನೃತ್ಯ ಸಂಯೋಜನೆಗಾಗಿ ಇತ್ತೀಚೆಗೆ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಆದರೆ ಇದೀಗ ಜಾನಿ ಮಾಸ್ಟರ್ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ, ರೇಪ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದಾರೆ.

ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕಾರಣಕ್ಕೆ ಈಗ ಜಾನಿ ಮಾಸ್ಟರ್ ಗೆ ಘೋಷಣೆಯಾಗಿದ್ದ ಪ್ರಶಸ್ತಿಯನ್ನೇ ರದ್ದುಗೊಳಿಸಲಾಗಿದೆ. ಎಲ್ಲಾ ಸರಿ ಹೋಗಿದ್ದರೆ ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಾನಿ ಮಾಸ್ಟರ್ ಪ್ರಶಸ್ತಿ ಪಡೆಯಬೇಕಿತ್ತು.

ಆದರೆ ಇದೀಗ ಪ್ರಶಸ್ತಿ ಅವರ ಕೈತಪ್ಪಿ ಹೋಗಿದೆ. ಜಾನಿ ಮಾಸ್ಟರ್ ಮೇಲೆ ಗಂಭೀರ ಪ್ರಕರಣ ದಾಖಲಾಗಿದೆ. ಈ ಕಾರಣಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಉದ್ದೇಶಕ್ಕೆ ಅವರಿಗೆ ನೀಡಬೇಕಾಗಿರುವ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಸೋನಲ್ ಸ್ವಿಮ್ ಸೂಟ್ ನಲ್ಲಿರುವ ರೊಮ್ಯಾಂಟಿಕ್ ಫೋಟೋ ಪ್ರಕಟಿಸಿದ ತರುಣ್ ಸುಧೀರ್