ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆಡಿ ಸಿನಿಮಾ ಹೀರೋಯಿನ್ ಯಾರು ಎಂಬುದು ಇದೀಗ ಬಹಿರಂಗವಾಗಿದೆ.
ಚಿತ್ರತಂಡ ಇಂದು ಕೆಡಿ ಸಿನಿಮಾ ಹೀರೋಯಿನ್ ಹೆಸರಿನ ಜೊತೆಗೆ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿ ರೀಶ್ಮಾ ನಾಣಯ್ಯ ಕಾಣಿಸಿಕೊಳ್ಳಲಿದ್ದಾರೆ.
ಏಕ್ ಲವ್ ಯಾ ಸಿನಿಮಾದಲ್ಲಿ ನಾಯಕಿಯಾಗಿದ್ದ ರೀಶ್ಮಾಗೆ ಈ ಸಿನಿಮಾದಲ್ಲಿ ರಗಡ್ ಪಾತ್ರ ಸಿಕ್ಕಿದೆ. ಮಚ್ಚ್ ಲಕ್ಷ್ಮಿಯಾಗಿ ರೀಶ್ಮಾ ಪಾತ್ರ ಮಾಡಲಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ ಇದಾಗಿದೆ. ಪ್ರೇಮ್ ಸತತ ಎರಡನೇ ಬಾರಿಗೆ ರೀಶ್ಮಾರನ್ನು ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಕೊಟ್ಟಿದ್ದಾರೆ.