ಜೈಲಿನಲ್ಲಿ ದರ್ಶನ್ ನೋಡಲು ಸಹಕೈದಿಗಳ ಕುಂಟು ನೆಪ

Krishnaveni K
ಶನಿವಾರ, 29 ಜೂನ್ 2024 (13:40 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ನೋಡಲು ಈಗ ಸಹಕೈದಿಗಳೂ ಕುಂಟು ನೆಪ ಹೇಳುತ್ತಿದ್ದು, ಪೊಲೀಸರಿಗೆ ಇವರನ್ನು ನಿಯಂತ್ರಿಸುವುದೇ ತಲೆನೋವಾಗಿದೆ.

ನಟ ದರ್ಶನ್ ರನ್ನು ಭದ್ರತಾ ಕಾರಣಗಳಿಂದ ಪ್ರತ್ಯೇಕ ಬಾರಕ್ ನಲ್ಲಿರಿಸಲಾಗಿದೆ. ಅವರನ್ನು ಭೇಟಿ ಮಾಡಲು ಯಾವ ಕೈದಿಗಳಿಗೂ ಅವಕಾಶ ನೀಡಲಾಗುತ್ತಿಲ್ಲ. ದರ್ಶನ್ ಕೂಡಾ ಯಾರನ್ನೂ ಮಾತನಾಡಿಸುವ ಮೂಡ್ ನಲ್ಲಿಲ್ಲ. ವಾಕಿಂಗ್ ಮಾಡುವುದು ಕೆಲ ಹೊತ್ತು ಟಿವಿ ನೋಡುವುದು ಬಿಟ್ಟರೆ ದರ್ಶನ್ ಬೇರೆ ಯಾರೊಂದಿಗೂ ಬೆರೆಯುವ ಪ್ರಯತ್ನ ಮಾಡಿಲ್ಲ.

ಆದರೆ ನಟ ದರ್ಶನ್ ಜೈಲಿನಲ್ಲಿರುವ ಕಾರಣಕ್ಕೆ ಸಹ ಕೈದಿಗಳು ಕುತೂಹಲದಿಂದ ಅವರನ್ನು ನೋಡಲು ಆರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಬರುತ್ತಿದ್ದಾರಂತೆ. ದರ್ಶನ್ ಇರುವ ಬಾರಕ್ ಜೈಲಿನ ಆಸ್ಪತ್ರೆ ಬಳಿಯೇ ಇದೆ. ಹೀಗಾಗಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ದರ್ಶನ್ ರನ್ನು ನೋಡಬಹುದು ಎಂಬುದು ಸಹ ಕೈದಿಗಳ ಯೋಜನೆ.

ಹೀಗಾಗಿ ಆರೋಗ್ಯ ಸಮಸ್ಯೆಯ ನೆಪ ಹೇಳಿಕೊಂಡು ಜೈಲಿನ ಆಸ್ಪತ್ರೆಗೆ ಲಗ್ಗೆಯಿಡುತ್ತಿದ್ದು ಆ ನೆಪದಲ್ಲಿ ದರ್ಶನ್ ನೋಡಲು ಹರಸಾಹಸಪಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿದೆ ಎನ್ನಲಾಗಿದೆ. ಒಂದೆಡೆ ಹೊರಗೆ ಅಭಿಮಾನಿಗಳ ದಂಡು, ಇನ್ನೊಂದೆಡೆ ಜೈಲಿನೊಳಗೂ ಕೈದಿಗಳಿಂದಲೂ ದರ್ಶನ್ ದರ್ಶನ ಪಡೆಯಲು ಕಾಟ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅ.25ರಂದು ಅಪ್ಪು ಫ್ಯಾನ್‌ ಡಮ್‌ ಆ್ಯಪ್‌ ಬಿಡುಗಡೆ: ಕಿಚ್ಚ ಸುದೀಪ್ ಧ್ವನಿಯಲ್ಲಿ ಹೊರಬಿತ್ತು ಟ್ರೇಲರ್

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಮುಂದಿನ ಸುದ್ದಿ
Show comments