Publish Date: Mon, 07 Sep 2020 (10:26 IST)
Updated Date: Mon, 07 Sep 2020 (10:27 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ನಟ ಜಗ್ಗೇಶ್ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಯೂರಿದ ನಟಿಯರ ಬಗ್ಗೆ ಕಿಡಿ ಕಾರಿದ್ದಾರೆ.
ನಮ್ಮ ಕನ್ನಡದ ಹೆಣ್ಣು ಮಕ್ಕಳು ಅಂದಿನಿಂದಲೂ ಚಿತ್ರರಂಗದಲ್ಲಿದ್ದು, ನಮ್ಮತನವನ್ನು ಉಳಿಸಲು ಕಷ್ಟಪಟ್ಟಿದ್ದಾರೆ. ಆದರೆ ಕನ್ನಡ ಗೊತ್ತಿದೆ ಎಂದು ಉತ್ತರದಿಂದ ಬಂದು ನಮ್ಮವರ ಮೋಡಿ ಮಾಡಿದವರೆ ಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು. ಇನ್ನು ಮೇಲಾದರೂ ನಮ್ಮವರಿಗೇ ಜೈ ಎನ್ನೋಣ ಎಂದು ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ.