Publish Date: Mon, 07 Sep 2020 (10:03 IST)
Updated Date: Mon, 07 Sep 2020 (10:05 IST)
ಬೆಂಗಳೂರು: ಡ್ರಗ್ ಮಾಫಿಯಾ ಆರೋಪದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ಇಂದು ವಿಚಾರಣೆಯಾಗಲಿದೆ.
ಒಂದು ವೇಳೆ ಸಿಸಿಬಿ ಸೂಕ್ತ ಸಾಕ್ಷ್ಯಾಧಾರ ಸಲ್ಲಿಸಲು ವಿಫಲವಾದರೆ ರಾಗಿಣಿಗೆ ಜಾಮೀನು ಸಿಗುವ ಸಾಧ‍್ಯತೆಯಿದೆ. ಆದರೆ ಜಾಮೀನು ಸಿಗದೇ ಹೋದರೆ ಮತ್ತೆ ಸಿಸಿಬಿ ವಶದಲ್ಲಿಯೇ ಇರಬೇಕಾಗುತ್ತದೆ.
ಮೂಲಗಳ ಪ್ರಕಾರ ರಾಗಿಣಿ ಡ್ರಗ್ಸ್ ಸೇವಿಸಿರುವುದಕ್ಕೆ ಕೇವಲ ಹೇಳಿಕೆಗಳ ಸಾಕ್ಷ್ಯ ಮಾತ್ರ ಸಿಕ್ಕಿದೆ. ಬೇರೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಸ್ವತಃ ರಾಗಿಣಿಯೂ ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ಸಿಸಿಬಿಗೆ ಇದು ಸವಾಲಾಗಿದೆ.