Select Your Language

Notifications

webdunia
webdunia
webdunia
webdunia

ಮೊನ್ನೆ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಈಗ ಜಗ್ಗೇಶ್ ಮಾಡಿದರು!

ಜಗ್ಗೇಶ್
ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಇದೀಗ ಜಗ್ಗೇಶ್ ಮಾಡಿದ್ದಾರೆ. ಅದೇನದು ಅಂತೀರಾ? ಈ ಸ್ಟೋರಿ ಓದಿ.
 

ವಾರಂತ್ಯದಲ್ಲಿ ಪುನೀತ್ ರಾಜ್ ಕುಮಾರ್ ಕಲರ್ಸ್ ವಾಹಿನಿಯಲ್ಲಿ ಫ್ಯಾಮಿಲಿ ಪವರ್ ಎನ್ನುವ ಶೋ ನಡೆಸಿಕೊಡುತ್ತಾರೆ. ಅದರಲ್ಲಿ ನವರಸನಾಯಕ ಜಗ್ಗೇಶ್ ಬಗ್ಗೆ ಅವರ ಹಾಸ್ಯ, ಎಕ್ಸ್ ಪ್ರೆಷನ್ ಬಗ್ಗೆ ಹೇಳಿಕೊಂಡು ಹೊಗಳಿದ್ದರು. ಜಗ್ಗೇಶ್ ಸರ್ ಮೀಟ್ ಆದಾಗಲೆಲ್ಲಾ ಖುಷಿಯಾಗುತ್ತದೆ. ನಾನು ಅವರ ದೊಡ್ಡ ಫ್ಯಾನ್ ಎಂದು ಪುನೀತ್ ಹೇಳಿಕೊಂಡಿದ್ದರು.

ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪುನೀತ್ ಜತೆಗಿರುವ ಫೋಟೋ ಹಾಕಿಕೊಂಡಿದ್ದು, ‘ನನ್ನ ನೆಚ್ಚಿನ ಕಣ್ಮಣಿ ಅಪ್ಪು ಜತೆ ಸೇರಿದಾಗಲೆಲ್ಲಾ ನಗುತ್ತ ಸಂತೋಷಪಡುತ್ತೇನೆ. ಕಸ್ತೂರಿ ನಿವಾಸದ ರಾಜಣ್ಣನಂತೆ ಕಾಣ್ತಾರೆ ಇತ್ತೀಚೆಗೆ ಅಪ್ಪು.. ತಂದೆಯಂತೆ ಮಗನಲ್ಲವೆ’ ಎಂದು ಜಗ್ಗೇಶ್ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?