Select Your Language

Notifications

webdunia
webdunia
webdunia
webdunia

ಹೊಸ ವೇಷ ಹಾಕಿದ್ರು ನವರಸನಾಯಕ ಜಗ್ಗೇಶ್

ಹೊಸ ವೇಷ ಹಾಕಿದ್ರು ನವರಸನಾಯಕ ಜಗ್ಗೇಶ್
ಬೆಂಗಳೂರು , ಮಂಗಳವಾರ, 11 ಡಿಸೆಂಬರ್ 2018 (09:56 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಇತ್ತೀಚೆಗೆ ತಮ್ಮ ಇಮೇಜ್ ಬದಲಿಸುವ ಚಿತ್ರಗಳತ್ತ ಗಮನಹರಿಸುತ್ತಿದ್ದಾರೆ. ಕಾಮಿಡಿ ನಾಯಕನಾಗಿ ಗುರುತಿಸಿಕೊಂಡಿದ್ದ ಜಗ್ಗೇಶ್ ಇತ್ತೀಚೆಗಷ್ಟೇ 8ಎಂಎಂ ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು.


ಇದೀಗ ಜಗ್ಗೇಶ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ‘ಕಾಳಿದಾಸ ಕನ್ನಡ ಮೇಸ್ಟ್ರು’ ಚಿತ್ರದ ಮುಹೂರ್ತ ನಿನ್ನೆಯಷ್ಟೇ ಮುಗಿದಿದೆ. ಹೆಸರೇ ಹೇಳುವಂತೆ ಚಿತ್ರದಲ್ಲಿ ಜಗ್ಗೇಶ್ ಕನ್ನಡ ಮೇಸ್ಟ್ರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಸೇರಿಸಲು ಹಣ ಹೊಂದಿಸುವುದೇ ದೊಡ್ಡ ತಲೆನೋವು. ರಾಜಕೀಯ ಪಕ್ಷಗಳು ತಮಗೆ ಓಟ್ ಹಾಕಿದವರಿಗೆ ಪುಕ್ಸಟೆ ಏನಾದ್ರೂ ಕೊಟ್ಟು ಕೈ ತೊಳೆದುಕೊಳ್ಳುತ್ತವೆ. ಆದರೆ ಏನಾದ್ರೂ ಕೊಡುವುದಿದ್ದರೆ ವಿದ್ಯೆ ಫ್ರೀಯಾಗಿ ಕೊಡಲಿ. ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ಜಗ್ಗೇಶ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇದು ಪಕ್ಕಾ ಕನ್ನಡ ಮೇಸ್ಟ್ರೊಬ್ಬರ ಸುತ್ತ ನಡೆಯುವ ಕತೆ ಎಂಬುದು ಪಕ್ಕಾ ಆಗಿದೆ. 8ಎಂಎಂ ಚಿತ್ರದಲ್ಲಿ ಗನ್ ಹಿಡಿದಿದ್ದ ಜಗ್ಗೇಶ್ ಇಲ್ಲಿ ಪೆನ್ ಹಿಡಿದು ಏನು ಮಾಡುತ್ತಾರೆ ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾಹಿದ್ ಕಪೂರ್ ಗೆ ಕ್ಯಾನ್ಸರ್?!! ಏನಂದ್ರು ‘ಪದ್ಮಾವತ್’ ಸ್ಟಾರ್?