Publish Date: Mon, 10 Dec 2018 (09:57 IST)
Updated Date: Mon, 10 Dec 2018 (10:01 IST)
ಬೆಂಗಳೂರು: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಟ ದರ್ಶನ್ ಮಾತ್ರವಲ್ಲದೆ, ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಯಾವತ್ತೂ ಧ್ರುವ ಸರ್ಜಾಗೆ ಸಹೋದರನಂತೆ ಬೆಂಬಲಿಸುವ ದರ್ಶನ್ ನಿನ್ನೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲೂ ಮನೆ ಕಾರ್ಯಕ್ರಮದಂತೆ ಭಾಗವಹಿಸಿದ್ದಾರೆ.
ಬಳಿಕ ಧ್ರುವ ಸರ್ಜಾ ಮತ್ತು ಪ್ರೇರಣಾ ಜೋಡಿಗೆ ದರ್ಶನ್ ಎರಡು ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು, ಧ್ರುವ ಸರ್ಜಾ ನಿನ್ನೆ ನಿಶ್ಚಿತಾರ್ಥ ಮುಗಿಸಿದ್ದು, ಮೂರು-ನಾಲ್ಕು ತಿಂಗಳೊಳಗೇ ಇವರ ವಿವಾಹ ನಡೆಯಲಿದೆ ಎಂದು ಅರ್ಜುನ್ ಸರ್ಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ