ಬೆಂಗಳೂರು: ಕಿಚ್ಚ ಸುದೀಪ್ ಗೆ ಎರಡನೇ ಬಾರಿ ಕೊರೋನಾ ಸೋಂಕು ತಗುಲಿದೆ ಎಂಬ ವದಂತಿಗಳ ಬಗ್ಗೆ ವಿಕ್ರಾಂತ್ ರೋಣ ನಿರ್ಮಾಪಕ ಜ್ಯಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಜ್ವರದಿಂದ ಬಳಲುತ್ತಿದ್ದು ಅವರಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ವಿಕ್ರಾಂತ್ ರೋಣ ಪ್ರಚಾರದಲ್ಲಿ ಭಾಗಿಯಾಗುವುದು ಕಷ್ಟವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಜ್ಯಾಕ್ ಮಂಜು ಕಿಚ್ಚ ಸುದೀಪ್ ಗೆ ಕೊರೋನಾ ತಗುಲಿದೆ ಎಂಬ ಸುದ್ದಿ ಸುಳ್ಳು. ಅವರಿಗೆ ಬಂದಿರುವುದು ಕೇವಲ ವೈರಲ್ ಜ್ವರ ಅಷ್ಟೇ. ಚೇತರಿಸಿಕೊಂಡು ಈ ಮೊದಲು ನಿಗದಿಯಾದಂತೆ ಅವರು ವಿಕ್ರಾಂತ್ ರೋಣ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ.