Select Your Language

Notifications

webdunia
webdunia
webdunia
webdunia

ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ ಸಚಿವ ಸಿ.ಟಿ.ರವಿ?

ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ ಸಚಿವ ಸಿ.ಟಿ.ರವಿ?
ಬೆಂಗಳೂರು , ಶುಕ್ರವಾರ, 2 ಅಕ್ಟೋಬರ್ 2020 (23:09 IST)
ಸಚಿವ ಸಿ.ಟಿ.ರವಿ ಪರೋಕ್ಷವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದು, ಭಾರೀ ಸಂಚಲನ ಸೃಷ್ಟಿಸಿದೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಬೇಕು ಎನ್ನುವ ಕೂಗು ಇನ್ನೂ ಅಡಗಿಲ್ಲ. ಈ ನಡುವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದ ಸಿ.ಟಿ.ರವಿ ಅವರು ಸಧ್ಯಕ್ಕೆ ರಾಜೀನಾಮೆ ಕೊಡುವ ಲಕ್ಷಣಗಳು ದೂರವಾಗಿವೆ ಎನ್ನಲಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಚಿವ ಸಿಟಿ ರವಿ ಆಯ್ಕೆಯಾಗಿದ್ದಾರೆ.  ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನೋ ರೂಲ್ಸ್ ಇದೆ. ಹೀಗಾಗಿ ಸಚಿವರು ರಾಜೀನಾಮೆಯ ಮಾತನ್ನಾಡಿದ್ದರು. ಆದರೆ ಈಗ ವರಸೆ ಬದಲಿಸಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿಯಲ್ಲಿ 75 ವರ್ಷ ದಾಟಿದವರು ರಾಜಕೀಯ, ಅಧಿಕಾರದಿಂದ ರಿಟೈರ್ಡ್ ಆಗಬೇಕೆಂಬ ರೂಲ್ಸ್ ಇದೆ. ಒಮ್ಮೊಮ್ಮೆ ಹೈಕಮಾಂಡ್ ರೂಲ್ಸ್ ನ್ನು ಬದಲಾವಣೆ ಮಾಡಿದ್ದಿದೆ ಎನ್ನೋ ಮೂಲಕ ಸಿಎಂ ವಿರುದ್ಧ ಟೀಕೆ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಬೀದಿಗಳಲ್ಲಿ ನಟ ಸುಶಾಂತ್ ಸಿಂಗ್ ಹೋರ್ಡಿಂಗ್ ಯಾಕೆ?