Webdunia - Bharat's app for daily news and videos

Install App

ಭಾರತದಿಂದ ಹಲವು ಬಾರಿ ಆಸ್ಕರ್‌ನಿಂದ ದೋಚಲಾಗಿದೆ: ದೀಪಿಕಾ ಪಡುಕೋಣೆ ಬೇಸರ

Sampriya
ಸೋಮವಾರ, 24 ಮಾರ್ಚ್ 2025 (19:03 IST)
Photo Courtesy X
ಮುಂಬೈ: ಅನೇಕ ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲಲು ಅರ್ಹವಾಗಿದ್ದವು ಆದರೆ ಪದೇ ಪದೇ ಕಡೆಗಣಿಸಲ್ಪಟ್ಟವು ಎಂದು ನಟಿ ದೀಪಿಕಾ ಪಡುಕೋಣೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಲೂಯಿ ವಿಟಾನ್ ಪ್ರದರ್ಶನಕ್ಕೆ ಸಿದ್ಧವಾಗುತ್ತಿರುವ ದೀಪಿಕಾ ಪಡುಕೋಣೆ ಅವರು, 2023 ರಲ್ಲಿ 'ನಾತು ನಾತು' ಗಾಗಿ ಆರ್‌ಆರ್‌ಆರ್ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಕ್ಷಣವನ್ನು ಹಂಚಿಕೊಂಡು ಮಾತನಾಡಿದರು. ಈ ವಿಡಿಯೋ ತುಣುಕನ್ನು ನಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶ್ರೀಮಂತ ಸಿನಿಮೀಯ ಪರಂಪರೆ ಮತ್ತು ಅಪಾರ ಪ್ರತಿಭೆಯ ಹೊರತಾಗಿಯೂ ಭಾರತದಿಂದ ಹಲವು ಬಾರೀ "ಆಸ್ಕರ್‌ನಿಂದ ದೋಚಲ್ಪಟ್ಟಿದೆ" ಎಂದು ಹೇಳುವ ಮೂಲಕ ನಟಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.

ಭಾರತವನ್ನು ಹಲವು ಬಾರಿ ಆಸ್ಕರ್‌ನಿಂದ ದೋಚಲಾಗಿದೆ. ಆಸ್ಕರ್ ಪಡೆಯುವ ಅನೇಕ, ಅನೇಕ ಅರ್ಹ ಚಲನಚಿತ್ರಗಳಿದೆ ಎಂದು ನಾನು ಭಾವಿಸುತ್ತೇನೆ ಆದರೆ ನಿರ್ಲಕ್ಷಿಸಲಾಗಿದೆ. 2023ರಲ್ಲಿ ಆರ್‌ಆರ್‌ಆರ್‌ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಘೋಷಿಸಿದಾಗ ನನಗೆ ಆ ಸಿನಿಮಾದ ಜತೆ ಯಾವುದೇ ಸಂಬಂಧವಿಲ್ಲದಿದ್ದರು ಅದೊಂದು ನನಗೆ ದೊಡ್ಡ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.

'ಚೆನ್ನೈ ಎಕ್ಸ್‌ಪ್ರೆಸ್' ನಟಿ ಈ ವರ್ಷದ ಆಸ್ಕರ್ ಪ್ರಶಸ್ತಿಗಳ ಬಗ್ಗೆಯೂ ಮಾತನಾಡುತ್ತಾ, 'ದಿ ಬ್ರೂಟಲಿಸ್ಟ್' ಚಿತ್ರಕ್ಕಾಗಿ ಆಡ್ರಿಯನ್ ಬ್ರಾಡಿ ಅವರ ಅತ್ಯುತ್ತಮ ನಟ ಪ್ರಶಸ್ತಿ ತನಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

ಅವರು ಮಾತನಾಡುತ್ತಿದ್ದಂತೆ, 'ಆಲ್ ವೀ ಇಮ್ಯಾಜಿನ್ ಆಸ್ ಲೈಟ್', 'ಲಾಪತಾ ಲೇಡೀಸ್', 'ತುಂಬದ್' ಮತ್ತು 'ದಿ ಲಂಚ್‌ಬಾಕ್ಸ್' ಸೇರಿದಂತೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಭಾರತೀಯ ಚಲನಚಿತ್ರಗಳ ತುಣುಕುಗಳನ್ನು ವೀಡಿಯೊದಲ್ಲಿ ತೋರಿಸಲಾಗಿದೆ. ವಿಶ್ವಾದ್ಯಂತ ಪ್ರಶಂಸೆ ಪಡೆದ ಈ ಚಿತ್ರಗಳು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳಲಿಲ್ಲ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments