Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಜತೆ ಉಳಿದವರೆಲ್ಲಾ ಮಾತುಬಿಟ್ಟಿದ್ದು ಯಾಕೆ…?

Webdunia
ಬುಧವಾರ, 3 ಜನವರಿ 2018 (07:15 IST)
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ನೀಡಿರುವ ಟಾಸ್ಕಗಳನ್ನು ಮನಸ್ಪೂರ್ತಿಯಾಗಿ ಮಾಡುತ್ತಿದ್ದು, ಸದಸ್ಯರೆಲ್ಲರೂ ಕುಳಿತು ಮಾತನಾಡುತ್ತಿರುವಾಗ ಮಧ್ಯದಲ್ಲಿ ಮಾತಿನ ಚಕಾಮಕಿ ನಡೆದು ನಿವೇದಿತಾ ಗೌಡ ಬಿಕ್ಕಿ ಬಿಕ್ಕಿಅತ್ತಿರುವ ಘಟನೆ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದಿದೆ.


ಈ ವಾರ ಮನೆಯಿಂದ ಹೊರ ಹೋಗುವುದು ತಾನೆ ಎಂದು ಜೆಕೆ  ಅವರು ಹೇಳಿದಾಗ, ಮಧ್ಯದಲ್ಲಿ ನಿವೇದಿತಾ ತಾನು ಟಾಪ್ 5 ರಲ್ಲಿ ಒಬ್ಬಳಾಗಿರುತ್ತೇನೆ ಎಂದು ಹೇಳಿದ್ದು, ಸದಸ್ಯರಲ್ಲಿ ಬೇಸರ ಮೂಡಿಸಿತ್ತು, ಕೆಲವು ಸದಸ್ಯರು ಅದನ್ನು ಆಕ್ಷೇಪಿಸಿದರು. ಆಗ ನಿವೇದಿತಾ ತಾನು ತಮಾಷೆ ಮಾಡಿರುವುದಾಗಿ ಎಷ್ಟೇ ಹೇಳಿದರು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.


ಆಗ ಬೇಸರಗೊಂಡ ನಿವೇದಿತಾ ಅಳುತ್ತಾ ಯಾರು ತನ್ನ ಬಳಿ ಮಾತನಾಡಬೇಡಿ ಎಂದಾಗ ಎಲ್ಲರೂ ಆಕೆಯ ಬಳಿ ಮಾತು ನಿಲ್ಲಿಸಿದರು. ಇದರಿಂದ ನಿವೇದಿತಾ ಇನ್ನಷ್ಟು ಬೇಸರಗೊಂಡು ಬಿಕಿಬಿಕಿ ಅತ್ತರು. ಕೊನೆಗೆ ಸಮೀರ್ ಆಚಾರ್ಯ ಹಾಗು ರಿಯಾಜ್ ಅವರು ನಿವೇದಿತಾರನ್ನು ಸಮಾಧಾನ ಪಡಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಮುಂದಿನ ಸುದ್ದಿ
Show comments