Webdunia - Bharat's app for daily news and videos

Install App

ನಿಮ್ಮನ್ನು ತುಂಬಾನೇ ಮಿಸ್ ಮಾಡುತ್ತೇನೆ, ಅಜ್ಜಿ ನೆನೆದು ಸಾನ್ವಿ ಸುದೀಪ್ ಭಾವುಕ ಪೋಸ್ಟ್‌

Sampriya
ಸೋಮವಾರ, 21 ಅಕ್ಟೋಬರ್ 2024 (18:13 IST)
Photo Courtesy X
ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ತಾಯಿಯನ್ನು ಕಳೆದುಕೊಂಡು ಆಘಾತಗೊಂಡಿದ್ದಾರೆ. ತಾಯಿಯನ್ನು ತುಂಬಾನೇ ಪ್ರೀತಿಸುತ್ತಿದ್ದ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯ ಅಗಲಿಕೆಯನ್ನು ನೆನೆದು ಬಾವುಕರಾಗಿ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಹಾಕಿಕೊಂಡಿದ್ದರು.

ಇತ್ತ ಅಜ್ಜಿಯ ಅಗಲಿಕೆಯ ನೆನೆದು ಸಾನ್ವಿ ಸುದೀಪ್ ಭಾವುಕರಾಗಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿ ಬರೆದುಕೊಂಡಿದ್ದಾರೆ.

ಬೆಳಗ್ಗೆ ಎದ್ದ ತಕ್ಷಣ ನೀವು ಕಳುಹಿಸುತ್ತಿದ್ದ ಸಂದೇಶವನ್ನು ಮಿಸ್ ಮಾಡುತ್ತೇನೆ. ನೀವು ತಯಾರಿಸುತ್ತಿದ್ದ ಆಹಾರವನ್ನು ಮಿಸ್ ಮಾಡುತ್ತೇನೆ. ನಾನು ಮನೆಗೆ ಬಂದಾಗ ನನಗಾಗಿ ಹೊರಗಡೆ ಕಾಯುತ್ತಿದ್ದ ನಿಮ್ಮನ್ನು ಮಿಸ್ ಮಾಡುತ್ತೇನೆ. ನನಗೆ ಆಶೀರ್ವಾದ ಬೇಕಾದಾಗ ನಿಮ್ಮ ಪಾದಗಳಿಗೆ ಬೀಳುವುದನ್ನು ನಾನು ಮಿಸ್ ಮಾಡುತ್ತೇನೆ. ನಾನು ಬಂದಾಗಲೆಲ್ಲಾ ನನ್ನ ಬೆನ್ನನ್ನು ಕಚಗುಳಿಸು ಎಂದು ಕೇಳುತ್ತಿದ್ದನ್ನು ಮಿಸ್ ಮಾಡುತ್ತೇನೆ.  ಎಲ್ಲಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಮಿಸ್ ಮಾಡುತ್ತೇನೆ ಎಂದು ಅಜ್ಜಿಯ ಬಗ್ಗೆ ಭಾವುಕರಾಗಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಅಂದಹಾಗೆ ವಯೋಸಹಜ ಕಾಯಿಲೆಯಿಂದ ಸುದೀಪ್ ಅವರ ತಾಯಿ ಭಾನುವಾರ ಬೆಳಗ್ಗೆ ನಿಧನರಾದರು. ಅದೇ ದಿನ ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರೋಜಾ ಅವರ ಅಂತ್ಯಕ್ರಿಯೆ ನಡೆಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ತಾನು ನಿಜಜೀವನದಲ್ಲೂ ಹಿರೋಯಿನ್‌ ಎಂದು ಡಿ ಬಾಸ್‌ ಅಭಿಮಾನಿಗಳ ಕಾಲೆಳೆದು, ಮತ್ತೊಂದು ಸವಾಲು ಹಾಕಿದ ರಮ್ಯಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಮುಂದಿನ ಸುದ್ದಿ
Show comments