ಸ್ಟಾರ್ ಕಲ್ಚರ್‌ನಿಂದ ಇಂತವರಿಗೆ ವಾಲ್ಯೂ ಕೊಡ್ತೇವೆ: ಚೇತನ್ ಅಹಿಂಸಾ

Sampriya
ಬುಧವಾರ, 31 ಜುಲೈ 2024 (13:24 IST)
Photo Courtesy X
ಬೆಂಗಳೂರು:  ಜೈಲೂಟ ಸರಿಹೊಂದುತ್ತಿಲ್ಲ ಮನೆಯೂಟ ನೀಡುವಂತೆ ಕೋರಿದ ನಟ ದರ್ಶನ್  ಅರ್ಜಿ ವಿಚಾರಣೆ ಬೆನ್ನಲ್ಲೇ ನಟ ಚೇತನ್ ಅವರು ಜೈಲೂಟದ ಬಗ್ಗೆ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಆಕ್ಟೀವ್ ಆಗಿರುವ ಚೇತನ್ ಅವರು ದೇಶದಲ್ಲಿ ನಡೆಯುತ್ತಿರುವ ಪ್ರಮುಖ ವಿಚಾರಗಳ ಕುರಿತು ಪ್ರತಿಕ್ರಿಯಿಸುತ್ತಿರುತ್ತಾರೆ.ಈಚೆಗೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಅರೆಸ್ಟ್ ಆಗಿರುವ ಬಗ್ಗೆಯೂ ಚೇತನ್ ಅವರು ಮಾತನಾಡಿದ್ದರು. ಇದೀಗ ಚೇತನ್ ಅವರು ತಮ್ಮ ಜೈಲಿನ ದಿನಗಳ ಬಗ್ಗೆ ಮಾತನಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೋರಾಟದ ಮೇಲೆ ಎರಡು ಬಾರಿ ಜೈಲು ಸೇರಿರುವ ನನಗೆ ಜೈಲಿನ ಊಟದಿಂದ ಏನೂ ಸಮಸ್ಯೆ ಆಗಿಲ್ಲ. ಒಂದು ಬಾರಿ ನನ್ನ ಹುಟ್ಟು ಹಬ್ಬ ಜೈಲಿನಲ್ಲಿ ಇದ್ದಾಗ ಪುಳಿಯೋಗರೆ ಕೊಟ್ಟಿದ್ರು ತುಂಬಾನೇ ಚೆನ್ನಾಗಿತ್ತು. ನನಗೆ ಜೈಲಿನ ಪುಳಿಯೋಗರೆ ಚಿತ್ರಾನ್ನ, ಅನ್ನ ಸಾಂಬಾರು , ಮುದ್ದೆ ಎಲ್ಲವೂ ನನಗೆ ಇಷ್ಟ ಆಯ್ತು ಎಂದು ನಟ ಚೇತನ್ ಅಹಿಂಸಾ ತಿಳಿಸಿದರು.

ದರ್ಶನ್ ಅವರನ್ನು ಈ ಹಿಂದೆ ಒಂದೆರಡು ಬಾರಿ ಭೇಟಿಯಾಗಿದ್ದೆ. ಈ ವಿಚಾರ ನನಗೆ ಮಾಧ್ಯಮದಿಂದ ಗೊತ್ತಾಗಿದೆ. ದರ್ಶನ್ ಅವರ ಸಿನಿಮಾದಲ್ಲಿ ಕಂಟೆಂಟ್‌ಗಿಂತ ಅವರು ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಅವರು ಹೆಚ್ಚು ಸಿನಿಮಾ ಮಾಡುತ್ತಾರೆ.

ಸಿನಿಮಾದಲ್ಲಿ ದರ್ಶನ್ ಬಿಟ್ಟು ಬೇರೆ ಯಾರು ಆ ಜಾಗದಲ್ಲಿ  ಹೀರೋ ಮಾಡಿದ್ರು ಸಿನಿಮಾ ಸಕ್ಸಸ್ ಆಗಲ್ಲ. ನಮಗೆ ಸ್ಟಾರ್ ಕಲ್ಚರ್ ಇದ್ದಾಗ ಇಂತಹವರಿಗೆ ವ್ಯಾಲ್ಯೂ ಕೊಡುತ್ತೇವೆ. ಸ್ಟಾರ್ ಗಿರಿಯಿಂದ ಸಿನಿಮಾ ಬೆಳೆಯಲ್ಲ. ಒಳ್ಳೆ ಕಥೆಯಿಂದ ಸಿನಿಮಾರಂಗ ಬೆಳೆಯುತ್ತೆ ಎಂದರು.

ಮೊದಲ ಬಾರಿ ನಾನು 6 ಜನರಿರುವ ಸೆಲ್‌ನಲ್ಲಿದ್ದೆ. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್‌ನಲ್ಲಿ ಹಾಕಿದ್ದರು. ಜೈಲಿನಲ್ಲಿರುವುದು ಸ್ವಲ್ಪ ಕಷ್ಟ. ಆದರೆ ದರ್ಶನ್ ಅವರಿಗೆ ಮಂತ್ರಿಗಳು ಪರಿಚಯರಿರುವುದರಿಂದ ಸೆಲೆಬ್ರಿಟಿ ಸೌಲಭ್ಯ ಸಿಕ್ಕಿದ್ರೆ ಕಷ್ಟ ಆಗದೇನು ಇರುಬಹುದು ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ನಮಗೆ ಮಕ್ಕಳು ಬೇಡವೆಂದ ನಟಿ ಸಂಗೀತಾ ಭಟ್‌, ದಿಢೀರನೇ ಆಸ್ಪತ್ರೆಗೆ ದಾಖಲು

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಮುಂದಿನ ಸುದ್ದಿ
Show comments