Publish Date: Mon, 03 Jun 2019 (17:48 IST)
Updated Date: Mon, 03 Jun 2019 (17:49 IST)
ಹೈದ್ರಾಬಾದ್: ಭರತ್ ಅನೇ ನೇನು, ವಿನಯ ವಿಧೇಯ ರಾಮ ತೆಲುಗು ಚಿತ್ರಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟಿ ಕೀರಾ ಆದ್ವಾನಿ, ಆ ಅನುಭವದಿಂದ ಹಲವು ಪಾಠ ಕಲಿತಿದ್ದೇನೆ ಎಂದು ನುಲಿದಿದ್ದಾರೆ.
ತೆಲುಗು ಭಾಷೆ ಮಾತನಾಡಲು ಬಾರದಿದ್ದರೂ ತನ್ನ ಹಾಟ್ ಸೌಂದರ್ಯದಿಂದಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಭರತ್ ಅನೇ ನೇನು ಚಿತ್ರದಲ್ಲಿ ನಟಿಸಿದ ನಂತರ ಹೆಚ್ಚಿನ ಅವಕಾಶಗಳು ಬಾರದಿದ್ದರೂ ಒಂದಲ್ಲಾ ಒಂದು ದಿನ ಒಳ್ಳೆ ಅವಕಾಶಗಳು ಬರುತ್ತವೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಹಿಂದಿ ರಿಮೇಕ್ ಚಿತ್ರವಾದ ಅರ್ಜುನ್ ರೆಡ್ಡಿ ಸಿನೆಮಾದ ಶೂಟಿಂಗ್‌ನಲ್ಲಿ ಬಿಜಿಯಾಗಿರುವ ಕೀರಾ, ನಾನು ಅಂತಹ ತಪ್ಪು ಮಾಡಿದ್ದೇನೆ. ತಪ್ಪು ಮಾಡುವುದು ಸಾಮಾನ್ಯ ಸಂಗತಿ. ತಪ್ಪನ್ನು ಮರೆತು ಹೊಸ ಜೀವನ ಅರಸುವುದು ಸೂಕ್ತ. ಇಲ್ಲವಾದಲ್ಲಿ ನಾವೇ ಡಿಪ್ರೆಶನ್‌ಗೆ ಒಳಗಾಗಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.