Select Your Language

Notifications

webdunia
webdunia
webdunia
webdunia

ಸುದೀಪ್ ಆ ನೋವನ್ನು ಹೇಗೆ ತಡೆದುಕೊಳ್ತಾರೋ ಏನೋ ಅನಿಸುತ್ತಿದೆ: ಅಂತಿಮ ದರ್ಶನ ಪಡೆದ ರಾಘಣ್ಣ

Actor Sudeep's mother Saroja passes away

Sampriya

ಬೆಂಗಳೂರು , ಭಾನುವಾರ, 20 ಅಕ್ಟೋಬರ್ 2024 (13:27 IST)
Photo Courtesy X
ಬೆಂಗಳೂರು: ನಟ ಸುದೀಪ್ ಅವರ ತಾಯಿ ಸರೋಜಾ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯಲು ಜೆ.ಪಿ. ನಗರದಲ್ಲಿರುವ ಸುದೀಪ್‌ ಮನೆಗೆ ಗಣ್ಯರ ದಂಡೇ ಧಾವಿಸುತ್ತಿದೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಸುದೀಪ್‌ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ, ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ ಎಂದು ಕಂಬನಿ ಮಿಡಿದರು.

ಸುದೀಪ್ ಅವರ ತಾಯಿ, ನಮ್ಮ ತಾಯಿ ಸ್ನೇಹಿತರು. ಅವರ ಮನೆಗೆ ನಾವು ಹೋಗೋದು, ನಮ್ಮ ಮನೆಗೆ ಅವರು ಬರುತ್ತಿದ್ದರು. ನಾವು ಹೊರಗಡೆ ಹೋಗುವಾಗ ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ವಿ ಎಂದರು.

ಸುದೀಪ್ ಅವರನ್ನು ನೋಡಿದ್ರೆ ತುಂಬಾ ಕಷ್ಟ ಆಗುತ್ತಿದೆ. ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ನಮಗೆ ಗೊತ್ತಿದೆ. ನಾನು ಅನುಭವಿಸಿದ್ದೇನೆ. ಸುದೀಪ್ ಆ ಕಷ್ಟ, ನೋವು ಹೇಗೆ ತಡೆದುಕೊಳ್ತಾರೋ ಏನೋ ಅನಿಸುತ್ತಿದೆ. ಈ ನೋವು ಭರಿಸುವ ಶಕ್ತಿಯನ್ನ ಅವರಿಗೆ ದೇವರು ಕೊಡಲಿ ಎಂದು ಅವರು ಹೇಳಿದರು.

ಸರೋಜಾ ಅಂತಿಮ ದರ್ಶನ ಪಡೆಯಲು ರಾಘವೇಂದ್ರ ರಾಜ್‌ಕುಮಾರ್ ಜೊತೆ ಪುತ್ರರಾದ ಯುವ ರಾಜ್‌ಕುಮಾರ್‌, ವಿನಯ್ ರಾಜ್‌ಕುಮಾರ್‌ ಕೂಡ ಬಂದಿದ್ದರು. ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸೇರಿ ಸಾಕಷ್ಟು ಸ್ಯಾಂಡಲ್‌ವುಡ್‌ನ ಕಲಾವಿದರು ಅಂತಿಮ ದರ್ಶನ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಥಮಗಳ ದೇವರೇ.. ಅಮ್ಮ ಹೋಗಿ ಬನ್ನಿ: ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಜಗ್ಗೇಶ್ ಸಂತಾಪ