ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಚಿತ್ರ ಏಪ್ರಿಲ್ 9ರಂದು ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸಂಗ್ರಹ ಮಾಡುತ್ತಿದೆ.
ವಕೀಲ್ ಸಾಬ್ ಚಿತ್ರ ಬಿಡುಗಡೆಯಾದ ದಿನದಿಂದ ಚಿತ್ರಮಂದಿರದಲ್ಲಿ ನೂಕುನುಗ್ಗಲು ಇದ್ದು, ಚಿತ್ರಮಂದಿರದ ಹೊರಗೆ ಅಭಿಮಾನಿಗಳ ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಮ್ಮ ದೇಶದಲ್ಲಿ ಈ ಕಥೆಯಾದರೆ ಯುಎಸ್ ನಲ್ಲಿಯೂ ವಕೀಲ್ ಸಾಬ್ ಚಿತ್ರ ಮೊದಲ ಪ್ರದರ್ಶನದಲ್ಲಿಯೇ 300ಕೆ ಡಾಲರ್ ಗಳಷ್ಟು ಮೊತ್ತವನ್ನು ಸಂಗ್ರಹಿಸಿದೆ ಎಂದು ಈಗಾಗಲೇ ಮಾಹಿತಿ ತಿಳಿದುಬಂದಿದೆ.
ಆದರೆ ಇದೀಗ ವಕೀಲ್ ಸಾಬ್ ಯುಎಸ್ ನಲ್ಲಿ ಶನಿವಾರ ಮುಂಜಾನೆ ಸಂಗ್ರಹ ಮೊತ್ತ 500ಕೆ ಗಡಿ ದಾಟಿದೆ ಎನ್ನಲಾಗಿದೆ. ಅಲ್ಲದೇ ವಾರಾಂತ್ಯದ ವೇಳೆಗೆ ಈ ಚಿತ್ರದ ಸಂಗ್ರಹ 700 ರ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ.