ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ತನಿಖೆ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ನಟ ಜೀವ ವಿಮೆ ಬಗ್ಗೆ ವಾಹಿನಿಗಳಲ್ಲಿ ಚರ್ಚೆ ನಡೆಯುತ್ತಿದೆ.
ಅಸಲಿಗೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಜೀವ ವಿಮೆಯನ್ನೇ ಮಾಡಿಸಿರಲಿಲ್ಲ ಎಂದು ಸುಶಾಂತ್ ತಂದೆ ಪರ ವಕೀಲರಾದ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆ ಸಾಬೀತಾದರೆ ವಿಮೆ ಹಣವು ಅವರ ಕುಟುಂಬದವರಿಗೆ ಸಿಗುವುದಿಲ್ಲ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಆಗುತ್ತಿವೆ.
ಇದರಿಂದ ಆತ್ಮಹತ್ಯೆಗೆ ಪ್ರೇರಣೆ ನೀಡಲಾಗಿದೆ ಅಥವಾ ಕೊಲೆ ಎಂದು ಬಿಂಬಿಸಲಾಗುತ್ತಿದೆ ಎಂದು ಕೆಲವು ಮಾಧ್ಯಮಗಳು ಸುಳ್ಳು ವರದಿ ಮಾಡುತ್ತಿವೆ ಎಂದಿದ್ದಾರೆ.
ಇದು ಮಾಧ್ಯಮಗಳು ಹರಡುತ್ತಿರುವ ಸುಳ್ಳು. ಸುಶಾಂತ್ ಯಾವುದೇ ಜೀವ ವಿಮೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
‘ಈ ಸುಳ್ಳು ಆರೋಪವು ತೀವ್ರ ಮಾನಹಾನಿಕರವಾಗಿದೆ. ವಾಹಿನಿಗಳು ಇದೇರೀತಿ ಮುಂದುವರಿದರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಲಾಗುವುದು’ ಎಂದೂ ಎಚ್ಚರಿಕೆ ನೀಡಿದ್ದಾರೆ.