ಐಂದ್ರಿತಾಗೆ ದಿಗಂತ್ ಮೊದಲು ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?!

Webdunia
ಭಾನುವಾರ, 16 ಡಿಸೆಂಬರ್ 2018 (09:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಸೂಪರ್ ಜೋಡಿ ಐಂದ್ರಿತಾ ರೇ ಮತ್ತು ದಿಗಂತ್ ಮೊನ್ನೆಯಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಈ ಜೋಡಿ ತಾವಿಬ್ಬರೂ ಲವ್ ಮಾಡಿದ್ದು ಹೇಗೆ ಎಂದು ಬಿಚ್ಚಿಟ್ಟಿದ್ದಾರೆ.


ಮನಸಾರೆ ಸಿನಿಮಾದಲ್ಲಿ ಈ ಜೋಡಿ ಜತೆಯಾಗಿ ನಟಿಸಿತ್ತು. ಅದೇ ಸಂದರ್ಭದಲ್ಲಿ ತಮ್ಮಿಬ್ಬರ ನಡುವೆ ಪ್ರೇಮಾಂಕುರವಾಯಿತು ಎಂಬುದನ್ನು ಇದೀಗ ದಿಗಂತ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಆ ಸಂದರ್ಭದಲ್ಲಿಯೇ ತಾನು ಪ್ರಪೋಸ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

‘ಮನಸಾರೆ ಶೂಟಿಂಗ್ ಎಲ್ಲಾ ಮುಗಿದ ಮೇಲೆ ನಾವೆಲ್ಲಾ ಒಂದು ಟ್ರಿಪ್ ಹೋಗಿದ್ದೆವು. ಆಗ ನಾನು ಐಂದ್ರಿತಾಗೆ ಒಂದು ಚಿಕ್ಕ ರಿಂಗ್ ಕೊಟ್ಟಿದ್ದೆ. ಹಾಗೇ ನಾವು ಮೊದಲ ಬಾರಿಗೆ ನಮ್ಮ ಪ್ರೀತಿ ಹಂಚಿಕೊಂಡಿದ್ದೆವು. ಆದರೆ ಆಗಿನಿಂದಲೂ ನಾವು ಒಳ್ಳೆಯ ಫ್ರೆಂಡ್ಸ್ ಎಂದು ಹೇಳುತ್ತಲೇ ಇದ್ದೆವು. ನಮ್ಮ ಪ್ರಕಾರ ಒಳ್ಳೆ ಫ್ರೆಂಡ್ಸ್ ಆದರಷ್ಟೇ ಒಳ್ಳೆಯ ಪ್ರೇಮಿಗಳಾಗಲು ಸಾಧ್ಯ. ಹಾಗಾಗಿ ನಾವು ಅಂದಿನಿಂದಲೂ ನಮ್ಮ ಸಂಬಂಧದ ಬಗ್ಗೆ ಸುಳ್ಳು ಹೇಳಿಲ್ಲ’ ಎಂದು ದಿಗಂತ್ ಹೇಳಿಕೊಂಡಿದ್ದಾರೆ. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಈ ಜೋಡಿ ಚಿತ್ರರಂಗದ ಗಣ್ಯರಿಗಾಗಿ ಆರತಕ್ಷತೆ ಏರ್ಪಡಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹಿರಿಯ ನಟ ಉಮೇಶ್ ಚಿಕಿತ್ಸೆಗೆ ನೆರವಾಗಲು ಮುಖ್ಯಮಂತ್ರಿಗಳಿಗೇ ಪತ್ರ ಬರೆದ ಸಚಿವ ತಂಗಡಗಿ

ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

ಕರುನಾಡಿನಲ್ಲಿ ಹೊಸ ದಾಖಲೆ ಬರೆದ ಕಾಂತಾರ: ವಿವಿಧ ಭಾಷೆಗಳ ಕಲೆಕ್ಷನ್‌ನ ಮಾಹಿತಿ ಇಲ್ಲಿದೆ

ವೈಲ್ಡ್ ಕಾರ್ಡ್ ಸ್ಪರ್ಧಿಯ ಮಾತಿಗೆ ನೊಂದು ಬಿಕ್ಕಿ ಬಿಕ್ಕಿ ಅತ್ತ ಜಾಹ್ನವಿ

ಮುಂದಿನ ಸುದ್ದಿ
Show comments