Select Your Language

Notifications

webdunia
webdunia
webdunia
webdunia

ದರ್ಶನ್ ಮತ್ತು ಪವಿತ್ರಾ ಗೌಡ ಜೊತೆ ಸಂಬಂಧ ಶುರುವಾಗಿದ್ದು ಯಾವಾಗ ವಿವರ ಬಯಲು

Darshan-Pavithra Gowda

Krishnaveni K

ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2024 (12:25 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಮತ್ತು ಪವಿತ್ರಾ ಗೌಡ ತಮ್ಮಿಬ್ಬರ ನಡುವೆ ಕಳೆದ 10 ವರ್ಷಗಳಿಂದ ಲಿವಿಂಗ್ ಟುಗೆದರ್ ಸಂಬಂಧವಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನ ಚಾರ್ಜ್ ಶೀಟ್ ನಲ್ಲಿ ತಮ್ಮಿಬ್ಬರ ನಡುವೆ ಸಂಬಂಧ ಶುರುವಾಗಿದ್ದು ಹೇಗೆ ಎಂಬುದು ಉಲ್ಲೇಖವಾಗಿದೆ. 2014 ರಿಂದ ಇಬ್ಬರ ಸಂಬಂಧ ಶುರುವಾಗಿತ್ತು ಎಂಬ ಅಂಶ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಬುಲ್ ಬುಲ್ ಸಿನಿಮಾ ಸಂದರ್ಭದಲ್ಲಿ ಪವಿತ್ರಾ ಗೌಡ ಸಂಪರ್ಕಕ್ಕೆ ಬಂದಿದ್ದರು.

ಬುಲ್ ಬುಲ್ ಸಿನಿಮಾಗೆ ಅಡಿಷನ್ ಗೆ ಕರೆದಿದ್ದಾರೆ ಎಂದು ತಿಳಿದು ಪವಿತ್ರಾ ಗೌಡ ಅವಕಾಶಕ್ಕಾಗಿ ದರ್ಶನ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಳು. ಆದರೆ ಆಗ ಅಡಿಷನ್ ಮುಗಿದಿತ್ತು. ಹೀಗಾಗಿ ಮ್ಯಾನೇಜರ್ ಬಳಿ ದರ್ಶನ್ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು. ಮುಂದೆ ಬೇರೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಪವಿತ್ರಾಗೆ ದರ್ಶನ್ ಭರವಸೆ ನೀಡಿದ್ದರಂತೆ.

ಅದಾದ ಬಳಿಕ ಚ್ಯಾಟಿಂಗ್, ಕರೆ ಶುರುವಾಗಿತ್ತು. ಇಬ್ಬರ ನಡುವೆ ಪ್ರೀತಿ ಬೆಳೆಯಿತು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಯಾವುದೇ ಫೋಟೋ ಪ್ರಕಟಿಸದಂತೆ ವಿಜಯಲಕ್ಷ್ಮಿ ಕೋರ್ಟ್ ನಿಂದ ಪವಿತ್ರಾ ವಿರುದ್ಧ ಸ್ಟೇ ತಂದಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಪ್ರಕರಣದ ಬೆನ್ನಲ್ಲೇ ಧ್ರುವ ಸರ್ಜಾ ಮ್ಯಾನೇಜರ್ ಅರೆಸ್ಟ್