Publish Date: Mon, 09 Sep 2024 (12:26 IST)
Updated Date: Mon, 09 Sep 2024 (12:29 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಏಷ್ಯಾನೆಟ್ ಸುವರ್ಣ ಜೊತೆಗಿನ ಸಂದರ್ಶನದಲ್ಲಿ ನಟ ದರ್ಶನ್ ಬಗ್ಗೆ ಹೇಳಿದ ಮಾತುಗಳಿಗೆ ಈಗ ಫ್ಯಾನ್ಸ್ ಗರಂ ಆಗಿದ್ದು, ನಾಯಿ ಬೊಗಳಿದ್ರೆ ಸಿಂಹಕ್ಕೆ ಏನೂ ಆಗಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಖ್ಯಾತ ಪತ್ರಕರ್ತ ಅಜಿತ್ ಹನುಮನಕ್ಕನವರ್ ಜೊತೆ ನಡೆಸಿದ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಕೇಳಲಾಯಿತು. ಮೊದಲು ಅಜಿತ್ ನೀವು ಫ್ಯಾಮಿಲಿ ಜೊತೆ ಒಳ್ಳೆ ಬಾಂಡಿಂಗ್ ಇಟ್ಟುಕೊಂಡಿರುವ ವಿಚಾರದಲ್ಲಿ ನೀವು 10 ಕ್ಕೆ 10 ಅಂಕ ಪಡೆಯುತ್ತೀರಿ ಎಂದಿದ್ದಾರೆ. ಇದಕ್ಕೆ ಮನೆಗೆ ಹೋದಾಗ ನೆಮ್ಮದಿ ಇರಬೇಕು. ಫ್ಯಾಮಿಲಿಯೇ ನಮ್ಮ ಮೂಲ. ಅದು ಚೆನ್ನಾಗಿಲ್ಲ ಎಂದರೆ ಎಷ್ಟೇ ಯಶಸ್ಸು ಪಡೆದರೂ ವೇಸ್ಟ್ ಎಂದಿದ್ದಾರೆ. ಇದಕ್ಕೆ ಅಜಿತ್ ಕೂಡಾ ಹೋಗೋದಕ್ಕೆ ಒಂದೇ ಮನೆಯಿರಬೇಕು ಎಂದು ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಧ್ರುವ ನಕ್ಕಿದ್ದಾರೆ.
ಬಳಿಕ ಅವರಿಗೆ ನೇರವಾಗಿ ಧ್ರುವಗೆ ದರ್ಶನ್ ಬಗ್ಗೆ ಏನನಿಸುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ನಾನು ಏನು ಹೇಳಲಿ, ಎಲ್ಲವೂ ಅವರವರವ ಮನೋಭಾವಕ್ಕೆ ತಕ್ಕಂತೆ ಎಂದಿದ್ದಾರೆ.
ನಾನು ಪ್ರತೀ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುತ್ತೇನೆ. ನಾನು ಅವರನ್ನು ಭೇಟಿ ಮಾಡುತ್ತೇನೆ ಎನ್ನುವುದಕ್ಕಿಂತ ನನ್ನನ್ನು ಭೇಟಿ ಮಾಡಲು ಬೆಳಿಗ್ಗೆಯೇ ಮನೆಯಿಂದ ಹೊರಡುತ್ತಾರೆ. ಅದಕ್ಕೆ ನಾನು ಯಾವತ್ತೂ ಆಭಾರಿ ಎಂದಿದ್ದಾರೆ. ಧ್ರುವ ಈ ಸಂದರ್ಶನ ನೋಡಿ ದರ್ಶನ್ ಅಭಿಮಾನಿಗಳು ಕಿಡಿ ಕಾರಿದ್ದಾರೆ. ನರಿ ಕೂತುಕೊಂಡು ಸಿಂಹದ ಬಗ್ಗೆ ಮಾತನಾಡಿದರೆ ಏನೂ ಹೆಚ್ಚು ಕಡಿಮೆಯಾಗಲ್ಲ. ನೀವು ಯಾವತ್ತೂ ಡಿ ಬಾಸ್ ಗೆ ಸಮ ಆಗಲ್ಲ ಎಂದು ಕಿಡಿ ಕಾರಿದ್ದಾರೆ.