ನಟ ಪ್ರಭಾಸ್ ನಟನೆಯ ಮತ್ತೆರಡು ಸಿನಿಮಾದ ನಿರ್ಮಾಣ ಹೊಣೆ ಹೊತ್ತ ಹೊಂಬಾಳೆ

Sampriya
ಶುಕ್ರವಾರ, 8 ನವೆಂಬರ್ 2024 (15:18 IST)
Photo Courtesy X
ದಕ್ಷಿಣದ ಟಾಪ್ ಪ್ರೊಡಕ್ಷನ್ ಹೌಸ್‌ಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್ ಖ್ಯಾತ ನಟ ಪ್ರಭಾಸ್ ಜೊತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಲು ಸಿದ್ಧವಾಗಿದೆ. ನಟ ಯಶ್ ನಟನೆಯ ಕೆಜಿಎಫ್ ಮತ್ತು ಪ್ರಭಾಸ್ ನಟನೆಯ ಸಲಾರ್ ಸಿನಿಮಾವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಪ್ರೊಡಕ್ಷನ್ ಇದೀಗ  ಪ್ರಭಾಸ್ ಜೊತೆಗಿನ ಮೂರು ಚಿತ್ರಗಳ ಒಪ್ಪಂದದ ಬಗ್ಗೆ ಸಾರ್ವಜನಿಕವಾಗಿ ಘೋಷಣೆ ಮಾಡಿದೆ.

ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಪ್ರಭಾಸ್ ಅವರ ಸಲಾರ್ ಭಾಗ 1ಕ್ಕೆ ಬಂಡವಾಳ ಹೂಡಿದೆ. ಇದರ ಹೊರತಾಗಿ ಚಿತ್ರದ ಎರಡನೇ ಭಾಗವನ್ನು ನಿರ್ಮಾಣವನ್ನು ಮಾಡಲಿದೆ. ಅದಲ್ಲದೆ ಪ್ರಭಾಸ್ ಜೊತೆ ಇನ್ನೇರಡು ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊಂಬಾಳೆ ಪ್ರೊಡಕ್ಷನ್ ವಹಿಸಿಕೊಂಡಿದೆ.

ಹೊಂಬಾಳೆ ಫಿಲ್ಮ್ಸ್ ಹೇಳಿಕೆಯಲ್ಲಿ, ಭಾರತೀಯ ಸಿನಿಮಾದ ಸಾರವನ್ನು ಆಚರಿಸುವ ಮತ್ತು ಅದನ್ನು ಜಗತ್ತಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಮೂರು-ಚಿತ್ರಗಳ ಪಾಲುದಾರಿಕೆಯಲ್ಲಿ ರೆಬೆಲ್ ಸ್ಟಾರ್ # ಪ್ರಭಾಸ್ ಅವರೊಂದಿಗೆ ಒಂದಾಗಲು ನಾವು ಹೆಮ್ಮೆಪಡುತ್ತೇವೆ. ಇದು ಮರೆಯಲಾಗದ ಸಿನಿಮಾ ಅನುಭವಗಳನ್ನು ಸೃಷ್ಟಿಸುವ ನಮ್ಮ ಬದ್ಧತೆಯ ಘೋಷಣೆಯಾಗಿದೆ. ವೇದಿಕೆಯನ್ನು ಹೊಂದಿಸಲಾಗಿದೆ ಮತ್ತು ಮುಂದಿನ ಮಾರ್ಗವು ಅಪರಿಮಿತವಾಗಿದೆ. ಪ್ರಯಾಣವು #Salaar2 ನೊಂದಿಗೆ ಪ್ರಾರಂಭವಾಗುತ್ತಿದ್ದಂತೆ ಸಿದ್ಧರಾಗಿ.

ಮೂಲಗಳ ಪ್ರಕಾರ, ಇನ್ನೆರಡು ಚಿತ್ರಗಳನ್ನು ಕ್ರಮವಾಗಿ ಹನುಮಾನ್ ಖ್ಯಾತಿಯ ಪ್ರಶಾಂತ್ ವರ್ಮಾ ಮತ್ತು ಲೋಕೇಶ್ ಕನಕರಾಜ್ ನಿರ್ದೇಶಿಸಲಿದ್ದಾರೆ. ಎರಡೂ ಚಿತ್ರಗಳು ಪ್ಯಾನ್-ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ತಯಾರಾಗಲಿವೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್

ತನ್ನ ಮೈಮಾಟದ ಹಿಂದಿನ ರಹಸ್ಯ ಬಿಚ್ಚಿಟ್ಟ ತಮನ್ನಾ ಭಾಟಿಯಾ

ಗಂಡ ರೋಷನ್ ಅಡುಗೆ ಕೈ ರುಚಿಗೆ ಮನಸೋತ ಅನುಶ್ರೀ

ಕಾಂತಾರ ಚಾಪ್ಟರ್ 1 ವಿರುದ್ಧ ದೈವಕ್ಕೇ ದೂರು

ಕಾಂತಾರ ಚಾಪ್ಟರ್ 1 ಒಂದು ವಾರದಲ್ಲಿ ಗಳಿಸಿದ್ದು ಎಷ್ಟು

ಮುಂದಿನ ಸುದ್ದಿ
Show comments