Select Your Language

Notifications

webdunia
webdunia
webdunia
webdunia

ಮುಂಬೈ: ಶೂಟಿಂಗ್‌ ಸೆಟ್‌ನಲ್ಲಿ ನಟ ಸುನೀಲ್‌ ಶೆಟ್ಟಿಗೆ ಗಾಯ

Sunil Shetty Health Condition, Sunil Shetty Injured, Sunil Shetty Top 10 Movies,

Sampriya

ಮುಂಬೈ , ಗುರುವಾರ, 7 ನವೆಂಬರ್ 2024 (19:45 IST)
Photo Courtesy X
ಮುಂಬೈ: ಶೂಟಿಂಗ್‌ ವೇಳೆ ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿಗೊಂಡಿರುವ ಘಟನೆ ನಡೆದಿದೆ.

ಮುಂಬೈನಲ್ಲಿ ತಮ್ಮ ವೆಬ್‌ ಶೋ ಹಂಟರ್‌ ಸೆಟ್‌ನಲ್ಲಿ ಸಾಹಸ ದೃಶ್ಯದ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ.  ದೃಶ್ಯಕ್ಕೆ ಮರದ ದಿಮ್ಮಿಯನ್ನು ಆಸರೆಯಾಗಿ ಬಳಸಬೇಕಾಗಿತ್ತು, ಆದರೆ ಸಮಯ ತಪ್ಪಿದ ಚಲನೆಯಿಂದಾಗಿ, ಮರದ ದಿಮ್ಮಿ ಆಕಸ್ಮಿಕವಾಗಿ ಸುನೀಲ್ ಶೆಟ್ಟಿಯ ಪಕ್ಕೆಲುಬಿಗೆ ಬಡಿದಿದೆ.

ಇದರಿಂದ ಸುನೀಲ್ ಶೆಟ್ಟಿ ತುಂಬಾನೇ ನೋವು ಅನುಭಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಗಾಯದ ತೀವ್ರತೆಯನ್ನು ತಿಳಿಯಲು ಎಕ್ಸ್‌ ರೇ ಮಾಡಿದ್ದು, ಆದರೆ ಯಾವುದೇ ಆಂತರಿಕ ಮುರಿತಗಳು
ಆಗಿಲ್ಲ.  ಸುನೀಲ್ ಶೆಟ್ಟಿ ಮುಂದಿನ ವೆಲ್‌ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ಅವರು ತಮ್ಮ ಹಳೆಯ ಸ್ನೇಹಿತರಾದ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರೊಂದಿಗೆ ಜೊತೆಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಡಬಲ್ ಧಮಾಕ, ಕ್ಷೀನ್ ಈಸ್ ಬ್ಯಾಕ್ ಎಂದ ಅಭಿಮಾನಿಗಳು