Select Your Language

Notifications

webdunia
webdunia
webdunia
webdunia

ಟೀಕಿಸುವವರನ್ನು ನಾಯಿಗೆ ಹೋಲಿಸಿದ ಜಗ್ಗೇಶ್ ಗೆ ನೆಟ್ಟಿಗರಿಂದ ಮತ್ತೆ ಕ್ಲಾಸ್

Jaggesh

Krishnaveni K

ಬೆಂಗಳೂರು , ಗುರುವಾರ, 7 ನವೆಂಬರ್ 2024 (15:53 IST)
ಬೆಂಗಳೂರು: ಟೀಕಿಸಿದವರನ್ನು ನಾಯಿಗೆ ಹೋಲಿಸಿ ಟ್ವೀಟ್ ಮಾಡಿದ್ದ ನವರಸನಾಯಕ ಜಗ್ಗೇಶ್ ಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಬಳಿಕ ಜಗ್ಗೇಶ್ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದರು.

ಈ ಘಟನೆ ಬಳಿಕ ಹಲವರು ನಟ ಜಗ್ಗೇಶ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ಜಗದೀಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಹಲವರು ಸೋಷಿಯಲ್ ಮೀಡಿಯಾ ಮೂಲಕ ಸತ್ತವರ ಬಗ್ಗೆ ಕಾಮೆಂಟ್ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಜಗ್ಗೇಶ್ ಆನೆಯೊಂದು ಹೋಗುವಾಗ ಸುತ್ತಲೂ ನಾಯಿಗಳು ಬೊಗಳುವ ಫೋಟೋ ಹಾಕಿ ಆನೆ ನಡೆಯುತ್ತಿರಬೇಕಾದರೆ ನಾಯಿಗಳು ಅದರಷ್ಟು ಎತ್ತರಕ್ಕೆ ತಾನು ಬೆಳೆಯಲಿಲ್ಲವಲ್ಲ ಎಂದು ಬೊಗಳುತ್ತವೆ. ಆದರೆ ಶ್ವಾನಗಳಿಗೆ ಬೊಗಳುವುದೇ ಕೆಲಸ ಎಂದಿದ್ದರು.

ಆದರೆ ಇದಕ್ಕೆ ಜನ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಮ್ಮೆ ನಾಯಿ ಕೂಡಾ ಆನೆ ಎಂಬ ಭ್ರಮೆಯಲ್ಲಿರುತ್ತದೆ ಎಂದು ಜಗ್ಗೇಶ್ ಗೆ ಟಾಂಗ್ ಕೊಟ್ಟಿದ್ದಾರೆ. ಎಷ್ಟೇ ಆದರೂ ನೀವು ಹಿರಿಯ ಕಲಾವಿದರು. ಆ ಗೌರವ ಉಳಿಸಿಕೊಳ್ಳಲು ಸೋತಿರಿ ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಥಹವರ ಜೊತೆ ಕೂರುವುದೂ ತಪ್ಪು: ಜಗ್ಗೇಶ್ ಗೇ ಟಾಂಗ್ ಕೊಟ್ಟರಾ ನಟಿ ರಕ್ಷಿತಾ