ಹೊಂಬಾಳೆ ಫಿಲಂಸ್ ನಿಂದ ಮಹತ್ವದ ಪ್ರಕಟಣೆ: ಕಾಂತಾರ ಸಿನಿಮಾ ವಿಡಿಯೋ ಹಾಕುತ್ತಿರುವವರು ಗಮನಿಸಿ

Krishnaveni K
ಶುಕ್ರವಾರ, 3 ಅಕ್ಟೋಬರ್ 2025 (11:51 IST)
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿರುವ ಕೆಲವರು ವಿಡಿಯೋ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಂಬಾಳೆ ಫಿಲಂಸ್ ಮಹತ್ವದ ಸೂಚನೆ ನೀಡಿದೆ.

ನಿನ್ನೆ ಬಿಡುಗಡೆಯಾಗಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಆದರೆ ಚಿತ್ರ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಪ್ರಮುಖ ದೃಶ್ಯಗಳ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.

ಕಾಂತಾರ ಸಿನಮಾ ನೋಡಿದೆ ಎಂದು ಜಗತ್ತಿಗೇ ತೋರಿಸಿಕೊಳ್ಳುವ ಭರದಲ್ಲಿ ಕೆಲವರು ಥಿಯೇಟರ್ ನಲ್ಲಿ ವಿಡಿಯೋ ಚಿತ್ರಿಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಿದ್ದಾರೆ. ಆದರೆ ಇದರಿಂದ ಚಿತ್ರತಂಡಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಯಲ್ಲಿ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದೆ. ‘ಈ ಚಿತ್ರದಲ್ಲಿ ತೆರೆಯ ಮುಂದೆ, ತೆರೆಯ ಹಿಂದೆ ಇರುವ ಸಾವಿರಾರು ಜನರ ಕನಸು ಇದೆ. ಪೈರಸಿಯಿಂದ ಈ ಕನಸನ್ನು ಪೋಲಾಗಲು ಬಿಡಬೇಡಿ. ದಯವಿಟ್ಟು ಚಿ್ರಮಂದಿರಗಳಲ್ಲಿ ಯಾವುದೇ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಸಣ್ಣ ವಿಡಿಯೋ ತುಣುಕು ಸಿನಿಮಾದ ಅಸಲಿ ಮಾಯೆಯನ್ನು ಮಲಿನ ಮಾಡುತ್ತದೆ. ಈ ಸಂಭ್ರಮ ದೊಡ್ಡ ಪರದೆಯಲ್ಲಿಯೇ ಇರಲಿ. ಈ ಅದ್ಭುತ ಪ್ರಯಾಣವನ್ನು ಒಟ್ಟಾಗಿ ಕಾಪಾಡೋಣ. ಕಾಂತಾರದ ಅನುಭವ ಎಂದೆಂದಿಗೂ ಚಿತ್ರಮಂದಿರಕ್ಕೆ ಮೀಸಲಾಗಲಿ’ ಎಂದು ಹೊಂಬಾಳೆ ಫಿಲಂಸ್ ಮನವಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IND vs WI: ಸೀಟಿ ಹೊಡೆದು ಶತಕ ಸಂಭ್ರಮಿಸಿದ ಕೆಎಲ್ ರಾಹುಲ್

ಕಾಂತಾರ ಚಾಪ್ಟರ್ 1 ರಾಕೇಶ್ ಶೆಟ್ಟಿಗೆ ಗೆಳೆಯರಿಂದಲೇ ಕಟೌಟ್: ನೀನಿರಬೇಕಿತ್ತು ಗೆಳೆಯಾ ಎಂದು ಕಣ್ಣೀರು

ಕಾಂತಾರ ಚಾಪ್ಟರ್ 1 ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ

ರಚಿತಾ ರಾಮ್ ಮನೆ ಮುಂದೆ ಇಂದು ಫ್ಯಾನ್ಸ್ ದಂಡು: ರಚಿತಾ ಬರೆದ ಒಂದು ಪತ್ರವೇ ಕಾರಣ

ಕಾಂತಾರ ಚಾಪ್ಟರ್ 1 ಗೆ ತೊಂದರೆ ಕೊಡುತ್ತಿರುವವರು ಇವರೇ

ಮುಂದಿನ ಸುದ್ದಿ
Show comments