ಅವರ ಆಶೀರ್ವಾದ ನಮ್ಮೇಲಿದೆ: ದರ್ಶನ್ ಅನುಪಸ್ಥಿತಿಗೆ ಭಾವುಕರಾದ ತರುಣ್ ಸುಧೀರ್- ಸೋನಾಲ್

Sampriya
ಭಾನುವಾರ, 11 ಆಗಸ್ಟ್ 2024 (15:22 IST)
Photo Courtesy X
ಬೆಂಗಳೂರು: ದೇವರು ಇಷ್ಟು ದಿವಸ ಕಾದಿದ್ದಕ್ಕೆ ಒಳ್ಳೆಯ ಸಂಗಾತಿಯನ್ನೇ ನೀಡಿದ್ದಾರೆ. ಸೋನಾಲ್ ಅವರ ಜತೆ ನನ್ನ ಹೊಸ ಜೀವನ ಶುರುವಾಗಿದ್ದು, ಜೀವನದ ಬೆಸ್ಟ್‌ ವ್ಯಕ್ತಿಯನ್ನು ಪತ್ನಿಯಾಗಿ ಕೈ ಹಿಡಿದಿದ್ದೀನಿ ಎಂದು ತರುಣ್ ಸುಧೀರ್ ಖುಷಿ ವ್ಯಕ್ತಪಡಿಸಿದರು.

ಇಂದು ಸೋನಾಲ್ ಹಾಗೂ ತರುಣ್ ಸುಧೀರ್ ಅವರ ಮದುವೆ ಸಮಾರಂಭ ಕುಟುಂಬದವರು, ಸ್ಯಾಂಡಲ್‌ವುಡ್‌ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ತರುಣ್ ಸುಧೀರ್ ಅವರು, ಎಲ್ಲರೂ ತಮ್ಮ ಮನೆಯ ಫಂಕ್ಷನ್ ತರಹ ಬಂದು ನಮಗೆ ಹಾರೈಸಿದ್ದಾರೆ. ದರ್ಶನ್ ಅವರ ಅನುಪಸ್ಥಿತಿಯನ್ನು ತುಂಬಾನೇ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನ ತಾಯಿ ಬಿಟ್ಟರೆ ದರ್ಶನ್ ಒಬ್ಬರೇ ಮದುವೆ ಆಗು ಅಂತಾ ಒತ್ತಾಯ ಮಾಡುತ್ತಿದ್ದದು ಎಂದು ಭಾವುಕರಾದರು.

ಈ ಹಿಂದೆ ದರ್ಶನ್ ಅವರ ಜತೆ ಮಾತನಾಡಿಯೇ ಆಗಸ್ಟ್‌ 11ಕ್ಕೆ ಮದುವೆ ದಿನ ನಿಗಧಿ ಮಾಡಿದ್ದೇವು. ಆದರೆ ನಾವು ಊಹಿಸಲಾಗದ ಘಟನೆ ನಡೆದು ಹೋಯಿತು. ದರ್ಶನ್ ಅವರ ಭೇಟಿ ವೇಳೆ ಯಾವುದೇ ಕಾರಣಕ್ಕೂ ಮದುವೆ ದಿನಾಂಕ ಚೇಂಜ್ ಮಾಡ್ಬೇಡ ಅಂತಾನೇ ಹೇಳಿದ್ದರು. ಅವರ ಆಶೀರ್ವಾದಂತೆ ಮದುವೆ ಆಗಿದ್ದೇನೆ. ಎಲ್ಲಿದ್ದರು ಅವರು ನಮಗೆ ವಿಶ್ ಮಾಡ್ತಾರೆ ಎಂದು ಸ್ಮರಿಸಿಕೊಂಡರು.

ಸೋನಾಲ್ ಅವರು ಮಾತನಾಡಿ, ನಾನು ಹುಟ್ಟಿದ ದಿನನೇ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದ್ದಕ್ಕೆ ಖುಷಿಯಿದೆ. ದರ್ಶನ್ ಅವರು ನಮ್ಮಿಬ್ಬರ ಜೀವನದಲ್ಲಿ ತುಂಬಾನೇ ದೊಡ್ಡ ರೂಲ್‌ ಪ್ಲೇ ಮಾಡಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲಿದೆ. ಬಂದಾ ತಕ್ಷಣ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆಯುತ್ತೇವೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಮುಂದಿನ ಸುದ್ದಿ
Show comments