Publish Date: Fri, 08 Dec 2017 (13:06 IST)
Updated Date: Fri, 08 Dec 2017 (13:11 IST)
ಬೆಂಗಳೂರು: ನಟ-ನಟಿಯರಿಗೆ ಕಾರಿನ ಹುಚ್ಚು ತುಸು ಜಾಸ್ತಿ ಎಂದೆನ್ನಬಹುದೇನು. ಇತ್ತೀಚೆಗೆ ಸಿನಿಮಾ ತಾರೆಯರು ಒಬ್ಬರ ನಂತರ ಒಬ್ಬರು ಕಾರು ಖರೀದಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕನ್ನಡದ ರಾಜಾಹುಲಿ ಯಶ್ 3 ಬೆಂಜ್ ಕಾರು ಖರೀದಿಸಿದ್ದರು. ಇದಕ್ಕೂ ಮೊದಲು ನಟ ಚೇತನ್ ಚಂದ್ರ ‘ಆಡಿ’ ಕಾರು ಖರೀದಿಸಿದ್ದರು. ಈಗ ನಟಿ ಹರಿಪ್ರಿಯಾ ತಮ್ಮಿಷ್ಟದ ಜಾಗ್ವಾರ್ ಕಾರು ಖರೀದಿಸಿದ್ದಾರೆ.
ಜ್ವಾಗಾರ್ ಕಾರಿನ ಒಡತಿಯಾಗಬೇಕು ಎಂಬುದು ಹರಿಪ್ರಿಯಾ ಅವರ ಕನಸಾಗಿತ್ತಂತೆ. ಅಂತೂ ದುಬಾರಿ ಕಾರಿನ ಜತೆ ತೆಗೆದುಕೊಂಡ ಫೋಟೋವನ್ನು ತಮ್ಮ ಅಧೀಕೃತ ಟ್ವಿಟ್ವರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
‘ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನನ್ನ ಕಾರಿನ ಕ್ರೇಜ್, ಡ್ರೈವಿಂಗ್ ಕ್ರೇಜ್ ಬಗ್ಗೆ ಕೆಲವರಿಗೆ ಗೊತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ