ಬೆಂಗಳೂರು: ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಹೇಗೆ ಎಂಬುದನ್ನು ಹರಿಪ್ರಿಯಾ ಕತೆಯಂತೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಹರಿಪ್ರಿಯಾ ಬಳಿ ಲಕ್ಕಿ ಮತ್ತು ಹ್ಯಾಪಿ ಎಂಬ ಎರಡು ನಾಯಿಗಳಿವೆ. ಅವರ ಜೊತೆಗಾರನಾಗಿ ಕ್ರಿಸ್ಟಲ್ ಎನ್ನುವ ನಾಯಿ ಮರಿಯನ್ನು ವಸಿಷ್ಠ ಸಿಂಹ ಉಡುಗೊರೆಯಾಗಿ ನೀಡುತ್ತಾರೆ. ಲಕ್ಕಿ, ಹ್ಯಾಪಿ ಮತ್ತು ಕ್ರಿಸ್ಟಲ್ ನಡುವೆ ಸ್ನೇಹ ಬೆಳೆಯಲು ಕೆಲವು ಸಮಯ ಹಿಡಿತು. ಕ್ರಿಸ್ಟಲ್ ತಮ್ಮ ಆಟಿಕೆಗಳಲ್ಲಿ ಆಡುತ್ತಾನೆ ಎಂದಾಗ ಲಕ್ಕಿ, ಹ್ಯಾಪಿಗೆ ಸಿಟ್ಟು ಬರುತ್ತಿತ್ತು. ಆದರೆ ಈಗ ಇಬ್ಬರೂ ಒಟ್ಟಿಗೇ ಆಡುತ್ತಾರೆ, ಒಟ್ಟಿಗೇ ಮಲಗಿ ನಿದ್ರಿಸುತ್ತಾರೆ.
ಈ ನಾಯಿಯನ್ನು ನನಗೆ ಗಿಫ್ಟ್ ಮಾಡಿದ್ದು ನಿಮ್ಮ ಪ್ರೀತಿಯ ಸಿಂಹ. ಈ ನಾಯಿಯನ್ನು ಗಿಫ್ಟ್ ಮಾಡಿದಾಗ ಅವನು ಒಂದು ಮೆಸೇಜ್ ತಂದಿದ್ದಾನೆ ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಒಂದು ಬರ್ತ್ ಮಾರ್ಕ್ ಇದೆ. ಇದು ಹಾರ್ಟ್ ಸಿಂಬಲ್ ನಲ್ಲಿದೆ. ನಮ್ಮಿಬ್ಬರ ಸಂಬಂಧಕ್ಕೆ ಇವನು ಕನ್ನಡಿ ಹಿಡಿದಿದ್ದಾನೆ ಎಂದು ಹರಿಪ್ರಿಯಾ ಹೇಳಿದ್ದಾರೆ.
ಈ ಮೊದಲು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಡುವೆ ತೆಲುಗು ಸಿನಿಮಾ ಸೆಟ್ ನಲ್ಲಿ ಪ್ರೀತಿ ಅರಳಿರಬಹುದು ಎನ್ನಲಾಗಿತ್ತು. ಆದರೆ ಈಗ ಹರಿಪ್ರಿಯಾ ತಮ್ಮ ನಡುವೆ ಪ್ರೀತಿ ಹುಟ್ಟಲು ನಿಜವಾದ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.