Publish Date: Thu, 05 Sep 2019 (09:25 IST)
Updated Date: Thu, 05 Sep 2019 (09:27 IST)
ಬೆಂಗಳೂರು: ನಿನ್ನೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ನ ಬೆಂಗಳೂರು ಬುಲ್ಸ್ ಮತ್ತು ಪಾಟ್ನಾ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಈ ಪಂದ್ಯವನ್ನು ವೀಕ್ಷಿಸಲು ನಟಿ ಹರಿಪ್ರಿಯಾ ತಮ್ಮ ಕನ್ನಡ್ ಗೊತ್ತಿಲ್ಲ ತಂಡದ ಜತೆಗೆ ಮೈದಾನದಲ್ಲಿ ಹಾಜರಿದ್ದರು.
ನಿನ್ನೆಯ ಪಂದ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಕರು ಸೇರಿದ್ದರು. ಅದೇ ರೀತಿ ನಟಿ ಹರಿಪ್ರಿಯಾ ಕೂಡಾ ತಮ್ಮ ಕನ್ನಡ್ ಗೊತ್ತಿಲ್ಲ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡದ ಜತೆಗೆ ಹಾಜರಿದ್ದರು.
ಪಂದ್ಯವನ್ನು ಎಂಜಾಯ್ ಮಾಡಿಕೊಂಡು, ಗೆದ್ದಾಗ ಕುಣಿದಾಡಿದ ಹರಿಪ್ರಿಯಾ ಈ ಪಂದ್ಯ ಅದ್ಭುತವಾಗಿತ್ತು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ವಿಶೇಷವೆಂದರೆ ಪಂದ್ಯದ ನಡುವೆ ಹರಿಪ್ರಿಯಾ ಅಭಿನಯಿಸಿದ್ದ ಕುರುಕ್ಷೇತ್ರ ಸಿನಿಮಾದ ಜುಮ್ಮಾ ಜುಮ್ಮಾ ಹಾಡು ಕೂಡಾ ಪಂದ್ಯದ ನಡುವೆ ಪ್ಲೇ ಆಗಿತ್ತು.