ಬಿಗ್‌ಬಾಸ್ ಮನೆಯಲ್ಲಿ ಇದೀಗ ಮಂಜಣ್ಣ, ತ್ರಿವಿಕ್ರಮ್, ಭವ್ಯಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಗೌತಮಿ ಹಾಗೂ ರಜತ್, ಶಿಶಿರ್, ಧನರಾಜ್, ಹನುಮಂತು, ಚೈತ್ರಾ, ಮೋಕ್ಷಿತಾ ಎರಡು ತಂಡಗಳಾಗಿ ಈ ವಾರ ಆಟವಾಡುತ್ತಿದ್ದಾರೆ. ಈಗಾಗಲೇ ತಂಡಗಳ ಮಧ್ಯೆ ಚಾಲೆಂಜ್ ರೌಂಡ್ ಜೋರಾಗಿ ನಡೆಯುತ್ತಿದೆ.
ನಿನ್ನೆ ನಡೆದ ಎಪಿಸೋಡ್‌ನಲ್ಲಿ ಮಂಜಣ್ಣ ಅವರ ತಂಡ ನೀಡಿದ ಕೂದಲು ಬೋಳಿಸುವ ಚಾಲೆಂಜ್ ಅನ್ನು ರಜತ್ ಅವರು ಸ್ವೀಕರಿಸಿದ್ದರು. ಇನ್ನು ರಜತ್ ಅವರ ತಂಡ ಹಾಗಲಕಾಯಿ ಹಾಗೂ ಮೆಣಸು ತಿನ್ನಲು ನೀಡಿದ ಚಾಲೆಂಜ್ ಅನ್ನು ಐಶ್ವರ್ಯಾ ಸೋತರೆ, ಗೌತಮಿ ಗೆದ್ದರು. ಇನ್ನೂ ಶಿಶಿರ್ ಅವರು ರಜತ್ ಅವರನ್ನು ಬೆನ್ನಮೇಲೆ ನಿಲ್ಲಿಸಿಕೊಂಡು ನಿಲ್ಲುವ ಚಾಲೆಂಜ್ ಅನ್ನು ಸೋತಿದ್ದರು.
ಇದೀಗ ತಂಡಗಳ ನಡುವೆ ಗೆಲುವಿಗಾಗಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಹನುಮಂತು ರಜತ್ ನೀಡಿದ ಚಾಲೆಂಜ್‌ನ್ನೇ ತ್ರಿವಿಕ್ರಂಗೆ ನೀಡಿದ್ದಾರೆ.
ಈ ಸವಾಲನ್ನು ಸ್ವೀಕರಿಸಲು ಆರಂಭದಲ್ಲಿ ತ್ರಿವಿಕ್ರಂ ಹಿಂದೇಟು ಹಾಕಿದರು. ನಂತರ ಇದನ್ನು ಒಪ್ಪಿದರು. ಸದ್ಯ ಈ ವಿಚಾರಕ್ಕೆ ವಾದ-ವಿವಾದ ನಡೆದಿದೆ. ಏನಾಗಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಎಪಿಸೋಡ್ ನೋಡಬೇಕು.