ಬಿಗ್‌ಬಾಸ್ ಸೀಸನ್ 11ರಲ್ಲಿ ತಮ್ಮ ಮುಗ್ದತೆ ಹಾಗೂ ಸ್ನೇಹದ ಮೂಲಕ ಹನುಮಂತ ಹಾಗೂ ಧನರಾಜ್ ಜನರಿಗೆ ಹತ್ತಿರವಾಗಿದ್ದರು. ಇವರಿಬ್ಬರ ನಿಷ್ಕಲ್ಮಶ ಸ್ನೇಹ ಮನೆ ಮಂದಿಯ ಜತೆಗೆ ಬಿಗ್‌ಬಾಸ್ ಪ್ರೇಕ್ಷಕರು ಇಷ್ಟ ಪಟ್ಟಿದರು.
ಇನ್ನೂ ಕೆಲವರು ಹನುಮಂತ ಮುಗ್ಧನ ಹಾಗೇ ನಾಟಕವಾಡುತ್ತಿದ್ದಾನೆ ಎಂದು ಕಮೆಂಟ್‌ಗಳು ಮಾಡಿದ್ದರು. ಅನೇಕ ರಿಯಾಲಿಟಿ ಶೋ ಮಾಡಿ ಬಂದಿರುವ ಅವನಿಗೆ ಹೇಗೆ ಪರಿಸ್ಥಿತಿಯನ್ನು ಬಳಸಿಕೊಳ್ಳಬೇಕೆಂದು ಗೊತ್ತಿದೆ ಎಂದು ಹೇಳುತ್ತಿದ್ದರು.
ಬಿಗ್‌ಬಾಸ್ ವಿನ್ನರ್ ಆದರೂ ಹನುಮಂತ ಹಾಗೆಯೇ ಇದ್ದಾನೆ ಎಂಬುದಕ್ಕೆ ಧನರಾಜ್ ಅವರು ಹಂಚಿಕೊಂಡ ವಿಡಿಯೋನೇ ಸಾಕ್ಷಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಬ್ರೇಕ್‌ನ ಸಮಯದಲ್ಲಿ ಹನುಮಂತು ಅಲ್ಲಿಂದ್ದ ತೆಂಗಿನ ಮರದ ಕಾಯಿಯನ್ನು ಕಲ್ಲಿನಿಂದ ಹೊಡೆದು ಬೀಳಿಸಿದ್ದಾನೆ. ನಂತರ ಅದರ ಮೇಲೆ ಕಲ್ಲೆತ್ತಿ ಹಾಕಿ ಒಡೆದಿದ್ದಾನೆ. ಅದಲ್ಲದೆ ಒಂದೇ ಏಟಿಗೆ ಎರಡು ತೆಂಗಿನಕಾಯಿಯನ್ನು ಬೀಳಿಸಿದ್ದಾನೆ. ಅಲ್ಲೇ ಇದ್ದ ಧನರಾಜ್ ಇದನ್ನು ನೋಡಿ ಶಾಕ್ ಆಗಿದ್ದಾನೆ.
ಅದಕ್ಕೆ ಹನುಮಂತು ನಾನು ಕುರಿ ಮೇಯಿಸಕ್ಕೆ ಹೋಗುವಾಗ ಹೀಗೇ ಮಾಡೋದು ಎಂದಿದ್ದಾನೆ.
ಧನರಾಜ್ ಹಂಚಿಕೊಂಡ ವಿಡಿಯೋ ನೋಡಿ, ಹನುಮಂತ ನಾಟಕ ಅನ್ನೋರಿಗೆ ಇದನ್ನಾ ತೋರ್ಸಿ ಹಳ್ಳಿಹೈದನಾ ಕಥೆನಾ ಎಂದು ಕಮೆಂಟ್ ಮಾಡಿದ್ದಾರೆ.