ಬೆಂಗಳೂರು: ಬಿಗ್ಬಾಸ್ ಸೀಸನ್ 11ರ ಟ್ರೋಪಿ ಗೆದ್ದ ಹಳ್ಳಿ ಹೈದ ಹನುಮಂತು ಇದೀಗ ಮಾಧ್ಯಮದವರ ಮುಂದೆ ಬಂದಿದ್ದಾರೆ.
ಬೇರೆಲ್ಲ ಸ್ಪರ್ಧಿಗಳು ನಿನ್ನೆಯೇ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದರು. ಆದರೆ ವಿನ್ನರ್ ಆದ ಹನುಮಂತು ಮಾತ್ರ ಕಂಡಿರಲಿಲ್ಲ. ಇದೀಗ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಹನುಮಂತು, ನಾನು ಎಪಿಸೋಡ್ ಮುಗಿದ ತಕ್ಷಣ ಹೋಗಿ ಮಲ್ಕೊಂಡೆ. ಎದ್ದಿದ್ದು ಲೇಟಾಯಿತು. ದಯವಿಟ್ಟು ಕ್ಷಮಿಸಿ ಎಂದು ಎಂದಿನಂತೆ ನಗೆ ಚಟಾಕಿ ಹಾಯಿಸಿದ್ದಾರೆ.
ನಾನು ಎಲ್ಲೂ ಹೋಗಿಲ್ಲ. ಇಲ್ಲೆ ಇದ್ದೆ. ಇನ್ನೂ ಈ ಗೆಲುವು ನನ್ನದಲ್ಲ. ಇದು ಕರ್ನಾಟಕ ಜನತೆ ನೀಡಿರುವ ಗೆಲುವು ಎಂದು ಧನ್ಯವಾದ ಸಲ್ಲಿಸಿದರು.
ಇನ್ನೂ ದೋಸ್ತನ ಬಗ್ಗೆ ಮಾತನಾಡಿದ ಅವರು, ನಾನು ಅವನ ಚಿಂತನೆ ಒಂದೇ ರೀತಿಯದ್ದು. ಆತ ಮನಸ್ಸಿನಲ್ಲಿದ್ದನ್ನು ಹೊರಗಡೆ ಹೇಳ್ತಿದ್ದ, ನಾನು ಮನಸ್ಸಿನ್ನಲ್ಲಿಡುತ್ತೇನೆ ಎಂದರು.