Publish Date: Fri, 12 Jun 2020 (09:40 IST)
Updated Date: Fri, 12 Jun 2020 (09:42 IST)
ಚೆನ್ನೈ: ನಟಿ ಹಂಸಿಕಾ ಮೊಟ್ವಾನಿ ಸದ್ಯದಲ್ಲೇ ಮದುವೆ ಆಗ್ತಾರಂತೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಈ ಬಗ್ಗೆ ನಟಿಯ ಸ್ಪಷ್ಟನೆ ಏನು ಗೊತ್ತಾ?
ಹಂಸಿಕಾ ಮುಂಬೈ ಮೂಲದ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರಂತೆ. ಇದಕ್ಕಾಗಿ ನಟನೆಗೆ ಗುಡ್ ಬೈ ಹೇಳಲಿದ್ದಾರಂತೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಹಂಸಿಕಾ ತಮ್ಮ ಟ್ವಿಟರ್ ಪೇಜ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
‘ಹೌದಾ?! ಯಾರವನು ನಂಗೂ ಸ್ವಲ್ಪ ಹೇಳಿ’ ಎಂದು ಸ್ಮೈಲಿ ಇಮೋಜಿ ಪ್ರಕಟಿಸಿರುವ ಹಂಸಿಕಾ ಮದುವೆ ಸುದ್ದಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ ಹಂಸಿಕಾ ‘ಮಹಾ’ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದು ಅವರ 50 ನೇ ಸಿನಿಮಾಗಿರಲಿದೆ.