Publish Date: Thu, 04 Jun 2020 (09:41 IST)
Updated Date: Thu, 04 Jun 2020 (09:43 IST)
ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಅಭಿನಯಿಸಿದ್ದ ‘ಸಾಹೋ’ ಬಾಕ್ಸ್ ಆಫೀಸ್ ನಲ್ಲಿ ನಿರೀಕ್ಷಿಸಿದ ಯಶಸ್ಸು ಕಂಡಿರಲಿಲ್ಲ. ಆದರೆ ಪ್ರಭಾಸ್ ಬಗೆಗಿನ ಅಭಿಮಾನಿಗಳ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.
ಈಗ ಪ್ರಭಾಸ್ 22 ನೇ ಸಿನಿಮಾಗೆ ತಯಾರಿ ನಡೆಯುತ್ತಿದ್ದು, ನಿರ್ದೇಶಕರು ಯಾರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಭಾಸ್ ಸಿನಿಮಾಗೆ ನಿರ್ದೇಶನ ಮಾಡಲಿರುವ ನಿರ್ದೇಶಕರ ಪಟ್ಟಿಯಲ್ಲಿ ಘಟಾನುಘಟಿಗಳ ಹೆಸರೇ ಕೇಳಿಬರುತ್ತಿದೆ.
ಕೆಲವರು ಬಾಲಿವುಡ್ ನ ಸಂಜಯ್ ಲೀಲಾ ಬನ್ಸಾಲಿ ಎನ್ನುತ್ತಿದ್ದಾರೆ. ಆದರೆ ಪ್ರಬಲವಾಗಿ ಕೇಳಿಬರುತ್ತಿರುವ ಹೆಸರು ಕನ್ನಡಿಗ ಪ್ರಶಾಂತ್ ನೀಲ್ ರದ್ದು. ಪ್ರಶಾಂತ್ ನೀಲ್ ಪ್ರಭಾಸ್ ರ ಸಿನಿಮಾ ನಿರ್ದೇಶಿಸಬೇಕು ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ. ಇಂದು ಪ್ರಶಾಂತ್ ನೀಲ್ ಬರ್ತ್ ಡೇ ಇದ್ದು, ಇಂದೇ ನಿರ್ಮಾಪಕರು ಪ್ರಶಾಂತ್ ನೀಲ್ ನಿರ್ದೇಶಕರು ಎಂಬ ಘೋಷಣೆ ಮಾಡಲಿದ್ದಾರೆ ಎಂದು ಬಲವಾಗಿ ನಂಬಿದ್ದಾರೆ. ಪ್ರಭಾಸ್ ಸಿನಿಮಾ ನಿರ್ದೇಶನ ಮಾಡಲಿರುವವರು ಯಾರು ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.