Select Your Language

Notifications

webdunia
webdunia
webdunia
webdunia

ಜಂಟಲ್ ಮ್ಯಾನ್ ನಿರ್ದೇಶಕನ ಪ್ರತಿಭೆಗೆ ಸಾಥ್ ನೀಡಿದ ಗುರುದೇಶ ಪಾಂಡೆ

ಜಂಟಲ್ ಮನ್
ಬೆಂಗಳೂರು , ಸೋಮವಾರ, 3 ಫೆಬ್ರವರಿ 2020 (15:35 IST)
ನಿರ್ದೇಶಕ ಕಂ ನಿರ್ಮಾಪಕ ಗುರುದೇಶ ಪಾಂಡೆಯವರ ಜಿ ಸಿನಿಮಾಸ್ ಬ್ಯಾನರ್ ಹೊಸ ಹೊಸ ಪ್ರತಿಭೆಗಳಿಗೆ  ಸಿನಿಮಾ ನಿರ್ದೇಶನ ಮಾಡಲು ಅವಕಾಶವನ್ನು ನೀಡುತ್ತಿದೆ. ಈ ಮೂಲಕ ಗಾಂದೀನಗರಕ್ಕೆ ಟ್ಯಾಲೆಂಟೆಡ್ ನಿರ್ದೇಶಕರು ಎಂಟ್ರಿ ಕೊಡಲು ಪ್ಲ್ಯಾಟ್ ಫಾರ್ಮ್  ಮಾಡಿ ಕೊಡುತ್ತಿದ್ದಾರೆ.

ಇದೀಗ ಈ  ಬ್ಯಾನರ್ ನಲ್ಲಿ ಮೂಡಿ ಬಂದಿರೋ ಜಂಟಲ್ ಮ್ಯಾನ್ ಚಿತ್ರ ಕೂಡ ಗಮನ ಸೆಳೆಯುತ್ತಿದೆ. ಕಂಟೆಟ್ ಹಾಗೂ ಕ್ವಾಲಿಟಿ ಇರೋ ಸಿನಿಮಾಗಳನ್ನು ಚಂದನವನಕ್ಕೆ ನೀಡಲು ಶ್ರಮಿಸುತ್ತಿರುವ ಜಿ ಸಿನಿಮಾಸ್ ಪ್ರತಿಭಾವಂತ ನಿರ್ದೇಶಕರಿಗೆ ವೇಧಿಕೆಯನ್ನು ಕಲ್ಪಿಸಿಕೊಡುತ್ತಿದೆ.
 
 ಜಿ ಸಿನಿಮಾಸ್ ಬ್ಯಾನರ್ ಹಾಗೂ ಗುರುದೇಶ ಪಾಂಡೆ ಪ್ರೊಡಕ್ಷನ್ನಲ್ಲಿ ಮೂಡಿ ಬಂದಿರೋ ಜಂಟಲ್ ಮ್ಯಾನ್ ಚಿತ್ರಕ್ಕೆ ಗುರುದೇಶ ಪಾಂಡೆ ಬಂಡವಾಳ ಹೂಡಿದ್ದಾರೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರ ಭರ್ಜರಿ ಪ್ರಚಾರದಿಂದ ಗಮನಸೆಳೆಯುತ್ತಿದೆ. ಜಂಟಲ್ ಮ್ಯಾನ್ ಆಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಎಂದಿನಂತೆ ತಮ್ಮ ಚಾರ್ಮ್ ನಿಂದ ಮಿಂಚಿದ್ದಾರೆ. ಪ್ರಜ್ವಲ್ ಗೆ ಜೋಡಿಯಾಗಿ ಬ್ಯೂಟಿಫುಲ್ ಅಂಡ್ ಟ್ಯಾಲೆಂಟೆಡ್ ನಟಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. 
ಜಂಟಲ್ ಮ್ಯಾನ್ ಟೀಸರ್, ಟ್ರೈಲರ್, ಹಾಡುಗಳು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಚಿತ್ರದ ಮೇಲಿನ  ಕ್ಯೂರಿಯಾಸಿಟಿಯನ್ನು ವಿನೂತನ ಪ್ರಚಾರದಿಂದ ಇನ್ನಷ್ಟು ದುಪ್ಪಟ್ಟು ಮಾಡಿರುವ ಚಿತ್ರತಂಡ ಇದೇ ಶುಕ್ರವಾರ ಅಂದ್ರೆ ಫೆಬ್ರವರಿ 7ಕ್ಕೆ  ಚಿತ್ರವನ್ನು ತೆರೆ ಮೇಲೆ ತರಲು ಸಿದ್ದವಾಗಿದೆ. 
ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದ್ದು, ಭರತ್ ಕಲ್ಯಾಣ್, ಅರುಣಾ ಬಾಲರಾಜ್, ವಿಜಯ್ ಚಂಡೂರ್,  ಸಂಚಾರಿ ವಿಜಯ್, ತಬಲ ನಾಣಿ,  ಬೇಬಿ ಆರಾಧ್ಯ ಚಿತ್ರದ ತಾರಾಬಳಗದಲ್ಲಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

'ಮೌನಂ' ಡಿ ಬಾಸ್ ಬ್ಲೆಸಿಂಗ್: ನಾಳೆ ಟ್ರೇಲರ್ ಲಾಂಚ್..!